ಸಿಂಧಿ ಪ್ರೌಢಶಾಲೆಯಿಂದ ಪರಿಸರ ಜಾಗೃತಿ ಗಾಗಿ ವಾಕಥಾನ್

ಬೆಂಗಳೂರು: ಹಸಿರು ಮತ್ತು ಸ್ವಚ್ಛ ಬೆಂಗಳೂರಿನ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕಬ್ಬನ್ ಪಾರ್ಕ್ ನಲ್ಲಿಂದು ಸಿಂಧಿ ಪ್ರೌಢಶಾಲೆ ಆಯೋಜಿಸಿದ್ದ ವಾಕಥಾನ್’ ಕಾರ್ಯಕ್ರಮವನ್ನು ಸಂಸದ ತೇಜಸ್ವಿ ಸೂರ್ಯ ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು.
ಕುಮಾರ ಕೃಪಾ ರಸ್ತೆಯಲ್ಲಿರುವ ಸಿಂಧಿ ಸೇವಾ ಸಮಿತಿಯು ಪ್ರಾರಂಭವಾಗಿ 40 ವರ್ಷವಾಗಿದೆ. ಅಂದಿನಿಂದಲೂ ಇಲ್ಲಿಯ ತನಕ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಅದೇ ರೀತಿ ನಮ್ಮ ಬೆಂಗಳೂರು ಇಂದು ಎದುರಿಸುತ್ತಿರುವ ದೊಡ್ಡ ಸಮಸ್ಯೆ ಕಸ ವಿಲೇವಾರಿ, ನಗರವನ್ನು ಕಾಡುತ್ತಿರುವ ಮತ್ತೊಂದು ಸಮಸ್ಯೆ ಎಂದರೆ ಏಕ ಬಳಕೆಯ ಪ್ಲಾಸ್ಟಿಕ್‌ನಿಂದ ಉಂಟಾಗುವ ಪ್ಲಾಸ್ಟಿಕ್ ಮಾಲಿನ್ಯ. ಪ್ರತಿಯೊಬ್ಬ ನಾಗರಿಕರನ್ನು ತಲುಪುವುದು ಮತ್ತು ಒಳಗೊಳ್ಳುವುದು ಮತ್ತು ಪ್ಲಾಸ್ಟಿಕ್ ಮಾಲಿನ್ಯದ ಅಪಾಯಗಳು ಮತ್ತು ಕಸದ ಸರಿಯಾದ ವಿಲೇವಾರಿಯ ಅಗತ್ಯದ ಬಗ್ಗೆ ಅವರಿಗೆ ಶಿಕ್ಷಣ ನೀಡುವುದು ಜಾಗೃತಿಯ ಮೂಲ ಉದ್ದೇಶವಾಗಿದೆ.

ಈ ಜಾಗೃತಿ ನಡಿಗೆ ಕಬ್ಬನ್‌ಪಾರ್ಕ್‌ನ ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ಫ್ಲ್ಯಾಗ್‌ಆಫ್ ಮಾಡುವ ಮೂಲಕ ಶುರುವಾಗಿ, ಅಲ್ಲಿಂದ ಶಾಲೆ, ಕಾಲೇಜಿನ ವಿದ್ಯಾರ್ಥಿಗಳು, ಹಲವಾರು ಗಣ್ಯರನ್ನೊಳಗೊಂಡು ಕಾಲ್ನಡಿಗೆ ಮೂಲಕ 4.ಕಿಮೀ ವಾಕಥಾನ್ ಕುಮಾರ ಕೃಪಾ ರಸ್ತೆಯಲ್ಲಿರುವ ಸಿಂಧಿ ಹೈಸ್ಕೂಲ್ ಮುಕ್ತಾಯಗೊಂಡಿತು.
ಅದೇ ರೀತಿ ಈ ಕಾರ್ಯಕ್ರಮದಲ್ಲಿ ಸಿಂಧಿ ಶಾಲೆಯ, ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಸುಮಾರು 2000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿ, ಬೆಂಗಳೂರಿನ ಜನರಿಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದರು.
ಈ ಸಂದರ್ಭದಲ್ಲಿ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರ ಸಂದೀಪ್ ಪಾಟೀಲ್, ಸಂಚಾರಿ ಪೊಲೀಸ್ ಆಯುಕ್ತರಾದ ರವೀಕಾಂತೇ ಗೌಡ, ವಸಂತ ನಗರದ ಮಾಜಿ ಕಾರ್ಪೋರೇಟರ್ ಸಂಪತ್ ಕುಮಾರ್, ಸಿಂಧಿ ಸೇವಾ ಸಮಿತಿ ಅಧ್ಯಕ್ಷ ಮದನ್ ದೌಲತಾರಂ, ಅಧ್ಯಕ್ಷ ಪ್ರಕಾಶ್.ಎಫ್.ಮಧ್ವನಿ, ಗೌರವಾನ್ವಿತ ಕಾರ್ಯದರ್ಶಿ ಅವಿನಾಶ್.ಎಸ್. ಕುಕ್ರೇಜಾ ಮತ್ತಿತರರು ಉಪಸ್ಥಿತರಿದ್ದರು.