ಶೃಂಗೇರಿ ತಹಶೀಲ್ದಾರ್ ಮತ್ತು ಗ್ರಾಮಕರಣಿಕ ಎಸಿಬಿ ಬಲೆಗೆ!

Spread the love

ಹಕ್ಕು ಪತ್ರ ನೀಡಲು ಡಿಮ್ಯಾಂಡ್ ಇಟ್ಟ ಶೃಂಗೇರಿ ತಹಶೀಲ್ದಾರ್ ಮತ್ತು ಗ್ರಾಮಕರಣಿಕ ಎಸಿಬಿ ಬಲೆಗೆ..!!

ಶೃಂಗೇರಿ: ಹಕ್ಕುಪತ್ರ ಹಗರಣದ ಸಂಬಂಧ ಶೃಂಗೇರಿ ತಹಶಿಲ್ದಾರ್ ಅಂಬುಜ ಹಾಗೂ ಗ್ರಾಮಕರಣಿಕ ಸಿದ್ದಪ್ಪರನ್ನು ಎಸಿಬಿ ಬಂದಿಸಿದ್ದು ತನಿಖೆಗೆ ಒಳಪಡಿಸಿದ್ದಾರೆ.

ತಹಶಿಲ್ದಾರ್ ಅಂಬುಜ ಹಕ್ಕು ಪತ್ರ ನೀಡುವ ಸಂಬಂಧ ಸಾಮಾಜಿಕ ಕಾರ್ಯಕರ್ತ ಸಂಜಯ್ ಎಂಬುವವರಿಗೆ 60000 ರೂಪಾಯಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ ಎಂದು ಸಂಜಯ್ ಎಸಿಬಿಗೆ ದೂರು ನೀಡಿದ್ದರು.

ಹಣ ಪಡೆಯುವಾಗ ನೆಮ್ಮಾರ್ ಗ್ರಾಮ ಲೆಕ್ಕಿಗ ಸಿದ್ದಪ್ಪ ಶೃಂಗೇರಿಯ ನಿರೀಕ್ಷಣಾ ಮಂದಿರದಲ್ಲಿ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇದರ ಆಧಾರದಲ್ಲಿ ತಹಶಿಲ್ದಾರ್ ಅಂಬುಜರನ್ನು ಕೂಡ ಬಂಧಿಸಿದ್ದು ತನಿಖೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ .

Right Click Disabled