ಬೆಂಗಳೂರು: ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಹೆಚ್ಚು ಅನುದಾನ

Spread the love

ಬಿಬಿಎಂಪಿ ವ್ಯಾಪ್ತಿಯ ರಾಜಕಾಲುವೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ₹ 1,479.55 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಬಿಬಿಎಂ‍ಪಿಯು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಬಿಜೆಪಿಯ 15 ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಒಟ್ಟು₹1,100 ಕೋಟಿ, ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ 9 ಕ್ಷೇತ್ರಗಳಿಗೆ ಒಟ್ಟು ₹248 ಕೋಟಿ ಹಾಗೂ ಜೆಡಿಎಸ್‌ ಶಾಸಕ ಆರ್‌.ಮಂಜುನಾಥ್‌ ಪ್ರತಿನಿಧಿಸುವ ದಾಸರಹಳ್ಳಿ ಕ್ಷೇತ್ರಕ್ಕೆ ₹125 ಕೋಟಿ ಅನುದಾನ ಹಂಚಿಕೆಯ ಪ್ರಸ್ತಾವವಿದೆ.

ಜಯನಗರ ಹಾಗೂ ಬಿಟಿಎಂ ಬಡಾವಣೆ ಕ್ಷೇತ್ರಗಳಿಗೆ ಯಾವುದೇ ಅನುದಾನದ ಉಲ್ಲೇಖವಿಲ್ಲ. ‘ಈ ಸಲವೂ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಶೇ 73ರಷ್ಟು ಅನುದಾನ ಹಂಚಿಕೆ ಮಾಡುವ ಮೂಲಕ ತಾರತಮ್ಯ ಎಸಗಲಾಗಿದೆ’ ಎಂದು ಕಾಂಗ್ರೆಸ್‌ನ ಶಾಸಕರು ಆರೋಪಿಸಿದ್ದಾರೆ.

‘ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಯಶವಂತಪುರ, ಕೆ.ಆರ್‌.‍ಪುರ, ಮಹದೇವಪುರದಂತಹ ಹೊರವಲಯದ ಕ್ಷೇತ್ರಗಳಲ್ಲಿ ಸಮಸ್ಯೆ ಹೆಚ್ಚು ಇದೆ. ಹೀಗಾಗಿ, ಅಲ್ಲಿಗೆ ಹೆಚ್ಚಿನ ಅನುದಾನ ಹಂಚಿಕೆ ಆಗಿದೆ. ನಗರದ ಹೃದಯ ಭಾಗದ ಕ್ಷೇತ್ರಗಳಿಗೆ ಸಹಜವಾಗಿ ಕಡಿಮೆ ಅನುದಾನ ನೀಡಲಾಗಿದೆ. ಇದರಲ್ಲಿ ತಾರತಮ್ಯ ಆಗಿಲ್ಲ’ ಎಂದು ಬಿಜೆಪಿಯ ಶಾಸಕರು ಸಮರ್ಥಿಸಿಕೊಂಡಿದ್ದಾರೆ.

2021ರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡು ಪ್ರವಾಹ ಉಂಟಾಗಿದೆ. ಅಧಿಕ ಮಳೆಯಿಂದಾಗಿ ರಾಜಕಾಲುವೆಗಳ ತಡೆಗೋಡೆಗಳು ಶಿಥಿಲಗೊಂಡು ಹಾನಿಯಾಗಿದೆ.

ನಗರದಲ್ಲಿ 842 ಕಿ.ಮೀ. ಉದ್ದದ ನಾಲ್ಕು ಪ್ರಮುಖ ರಾಜಕಾಲುವೆಗಳು ಮತ್ತು ದ್ವಿತೀಯ ಹಂತದ 97 ಕಿ.ಮೀ ರಾಜಕಾಲುವೆಗಳು ಇದ್ದು, 2018-19, 2019-20, 2020-21ರಲ್ಲಿ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿಯಲ್ಲಿ 112 ಕಿ.ಮೀ. ಉದ್ದದ ಪ್ರಥಮ ಮತ್ತು ದ್ವಿತೀಯ ಹಂತದ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗಳು ಅನುಮೋದನೆಗೊಂಡಿದ್ದವು. ಈ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ.

2021ರ ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಯಲಹಂಕ ವಲಯದ ಕೇಂದ್ರೀಯ ವಿಹಾರ, ಟಾಟಾ ನಗರ ಮತ್ತು ಜೆ.ಎನ್.ಆರ್.ಸಿ ಆವರಣ, ಮಹದೇವಪುರ ವಲಯದ ಕಸವನಹಳ್ಳಿ, ಗೆದ್ದಲಹಳ್ಳಿ, ಆರ್.ಆರ್. ನಗರ ವಲಯದ ಪ್ರಮೋದ್ ಬಡಾವಣೆ, ದೊಡ್ಡಬಿದಿರಕಲ್ಲು, ಬೊಮ್ಮನಹಳ್ಳಿ ವಲಯದ ಎಚ್.ಎಸ್.ಆರ್ ಬಡಾವಣೆ, ದಾಸರಹಳ್ಳಿ ವಲಯ ಗುಂಡಪ್ಪ ಬಡಾವಣೆ, ದಕ್ಷಿಣ ವಲಯದ ಕೆ.ಪಿ.ಅಗ್ರಹಾರ, ಮನುವನ, ಪಶ್ಚಿಮ ವಲಯದ ಸಣ್ಣಕ್ಕಿ ಬಯಲು, ಪೂರ್ವ ವಲಯದ ಟೆಲಿಕಾಂ ಬಡಾವಣೆ, ನಾಗವಾರಪಾಳ್ಯ ಹಾಗೂ ಇತರೆ ಸ್ಥಳಗಳು ಜಲಾವೃತಗೊಂಡಿದ್ದವು. ಪ್ರವಾಹದಿಂದ ಹಾನಿ ಉಂಟಾಗುವುದನ್ನು ತಪ್ಪಿಸಲು ತುರ್ತಾಗಿ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಪ್ರಥಮ ಹಂತದ ರಾಜಕಾಲುವೆಗಳು (60.82 ಕಿ.ಮೀ) ಹಾಗೂ ದ್ವಿತೀಯ ಹಂತದ ರಾಜಕಾಲುವೆಗಳು ( 97

Right Click Disabled