ಶಾಲೆಯನ್ನು ಸುಟ್ಟು ಹಾಕುವುದಾಗಿ ಯಾರೋ ಬೆದರಿಕೆ ಹಾಕಿದ್ದಾರೆ

Spread the love

ಕಾರ್ಪೊರೇಟ್ ಆಡಳಿತವನ್ನು ಮೀರಿ ಸಂಘಟಿತ ಮತ್ತು ಅಸಂಘಟಿತ ವಲಯಗಳನ್ನು ಒಟ್ಟುಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಂಪನಿಗಳ ಕಾರ್ಯದರ್ಶಿಗಳನ್ನು ಒತ್ತಾಯಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಆನ್‌ಲೈನ್ ಮಾಧ್ಯಮದ ಮೂಲಕ ‘ಇನ್‌ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿಸ್ ಆಫ್ ಇಂಡಿಯಾ’ (ICSI) ಆಯೋಜಿಸಿದ್ದ ಮೂರು ದಿನಗಳ 49 ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದರು.
“ಉತ್ತಮ ಆಡಳಿತ: ಸಾರ್ವತ್ರಿಕ ಧರ್ಮ’ ಎಂಬ ವಿಷಯದ ಕುರಿತು ಮಾತನಾಡಿ, ನಾವು ವಿವೇಚನೆಯಿಂದ ವರ್ತಿಸದಿದ್ದರೆ ಧರ್ಮವನ್ನು ಸಾಧಿಸಲಾಗುವುದಿಲ್ಲ. ನ್ಯಾಯವು ಉತ್ತಮ ಆಡಳಿತದ ಪ್ರಮುಖ ಅಂಶವಾಗಿದೆ, ಮತ್ತು ‘ಅಸಂಘಟಿತ ವಲಯವೂ ಆಡಳಿತದ ಚೌಕಟ್ಟಿನ ಭಾಗವಾಗಿದ್ದರೆ ಮಾತ್ರ ಇದನ್ನು ಸಾಧಿಸಬಹುದು, ”ಎಂದು ಅವರು ಹೇಳಿದರು.

ಕೋವಿಡ್‌-19 (COVID-19) ಸಾಂಕ್ರಾಮಿಕ ರೋಗದಿಂದಾಗಿ ಇಂದಿನ ಡಿಜಿಟಲ್ ಯುಗದಲ್ಲಿ ಹೊಸ ವಿಧಾನಗಳು ಮತ್ತು ಹೊಸ ಸವಾಲುಗಳನ್ನು ಯಶಸ್ವಿಗೊಳಿಸುವಲ್ಲಿ ಕಂಪನಿಯ ಕಾರ್ಯದರ್ಶಿಗಳ ಪಾತ್ರವಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅಭಿಪ್ರಾಯಪಟ್ಟರು.

ಡಿಜಿಟಲ್ ಇಂಡಿಯಾ ಉಪಕ್ರಮದ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಇರಾನಿ ಶ್ಲಾಘಿಸಿದರು. ಅನೇಕ ಜನರು ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದ ಬಗ್ಗೆ ವ್ಯಂಗ್ಯವಾಡಿದ್ದಾರೆ. ಆದರೆ, ಜಾಗತಿಕವಾಗಿ ಕೋವಿಡ್‌ ಸೋಂಕು ಹರಡಿದ ನಂತರ, ಡಿಜಿಟಲ್ ಇಂಡಿಯಾ ಪ್ರತಿಯೊಬ್ಬರ ಭಾಗವಾಯಿತು. ಈ ಸಂದರ್ಭಗಳಲ್ಲಿ, CS ಮತ್ತು CA (ಚಾರ್ಟೆಡ್ ಅಕೌಂಟೆಂಟ್ಸ್) ಪಾತ್ರಗಳು ಕೂಡ ನಾಟಕೀಯವಾಗಿ ಬದಲಾಗಿವೆ. ಬದಲಾಗುತ್ತಿರುವ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಬೇಕು ಮತ್ತು ಡಿಜಿಟಲ್ ಯುಗಕ್ಕೆ ಹೊಂದಿಕೊಳ್ಳಲು ತಮ್ಮನ್ನು ತಾವು ನವೀಕರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

Right Click Disabled