ಬೆಂಗಳೂರು ವಿವಿ: ಬಿಎ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ

Spread the love

ಬೆಂಗಳೂರು: ನ.08: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಶ್ರೀ ಬಾಲಾಜಿ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಇತಿಹಾಸ ವಿಷಯದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಬೆಂವಿವಿಯ ಬಿಎ ವಿಭಾಗದಿಂದ ಸತೀಶ್ ಎಲ್. ಐದನೇ ಸೆಮಿಸ್ಟರ್, ಪವಿತ್ರ, ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಬಹುಮಾನವನ್ನು ಪಡೆದಿದ್ದಾರೆ.
ಇದೇ ಸಂದರ್ಭದಲ್ಲಿ ಬಿಎ ವಿಭಾಗದ ಸಂಯೋಜಕರು ಹಾಗೂ ಅರ್ಥಶಾಸ್ತ್ರದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಎಸ್.ಆರ್. ಕೇಶವ ಅವರು ವಿಜೇತರನ್ನು ಅಭಿನಂದಿಸಿದರು. ಈ ವೇಳೆ ಬಿಎ ವಿಭಾಗದ ನಾನಾ ವಿಷಯಗಳ ಅತಿಥಿ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಜಣ್ಣ ಕೆ, ಡಾ. ಶಶಿಕುಮಾರ್ ವಿ, ಹರೀಶ್ ಹಾಜರಿದ್ದರು.

Right Click Disabled