ಕಲಾ ನರ್ತನ ಡಾನ್ಸ್ ಕ್ರೀವ್ (ರಿ.) ಜನ್ನಾಡಿ ನೃತ್ಯ ಸಂಸ್ಥೆಯ ಮಡಿಲಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ …!

Spread the love

ಕುಂದಾಪುರ ತಾಲೂಕಿನ ಜನ್ನಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಕಳೆದ ಏಳು ವರುಷಗಳಿಂದ ಮಕ್ಕಳಿಗೆ ನೃತ್ಯ ತರಬೇತಿ ನೀಡುತ್ತಾ,ವ್ಯಕ್ತಿತ್ವ ವಿಕಸನಕ್ಕೆ ಪೂರಕ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಈಗಾಗಲೇ ಜಿಲ್ಲೆಯ ಅತ್ಯುತ್ತಮ ನೃತ್ಯ ತಂಡವಾಗಿ ಹೊರಹೊಮ್ಮಿದ ಈ ಸಂಸ್ಥೆ ಅಶಕ್ತರಿಗೆ ಸಹಾಯಧನ,ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು,ವಿದ್ಯಾರ್ಥಿ ವೇತನ ನೀಡುವುದರ ಮೂಲಕ ಸಮಾಜ ಮುಖಿ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ.
ಶ್ರೀ ಮನೀಷ್ ಕುಲಾಲ್ ನೀರ್ಜೆಡ್ಡು ಇವರ ಸಾರಥ್ಯದಲ್ಲಿ ನಡೆಯುತ್ತಿರುವ ಈ ಸಂಸ್ಥೆಗೆ 70ನೇ ಕರ್ನಾಟಕ ರಾಜ್ಯೋತ್ಸವ ಸುಸಂದರ್ಭದಲ್ಲಿ ಉಡುಪಿ ಜಿಲ್ಲಾಡಳಿತ ಮತ್ತು ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದರು.
ಕಲಾ ನರ್ತನ ಸಂಸ್ಥೆಯ ಸ್ಥಾಪಕರಾದ ಮನೀಶ್ ಕುಲಾಲ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಈ ಸುಸಂದರ್ಭದಲ್ಲಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಕಲಾ ನರ್ತನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ರೇಖಾ ಪ್ರಭಾಕರ್, ಕಾರ್ಯದರ್ಶಿ ಅರ್ಚನಾ ಸಂತೋಷ್ ಮತ್ತು ಪದಾಧಿಕಾರಿಗಳು, ನೃತ್ಯ ನಿರ್ದೇಶಕರಾದ ವಿಖ್ಯಾತ್ ಜಿ.ಕೆ ,ಪೋಷಕರು, ವಿದ್ಯಾರ್ಥಿಗಳು, ಹಿತೈಷಿಗಳು,ಬಂಧುಗಳು ಉಪಸ್ಥಿತರಿದ್ದರು.

Right Click Disabled