ಕಾರ್ಗಿಲ್ ವಿಜಯ ದಿವಸ ಆಚರಣೆ ಮತ್ತು ಮಹತ್ವ”ಕಾರ್ಗಿಲ್ ವಿಜಯ ದಿವಸ್” ಪ್ರತಿ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಆಚರಣೆ ಮಾಡುತ್ತಾರೆ.
ಕಾರ್ಗಿಲ್ ವಿಜಯ ದಿವಸ ಆಚರಣೆ ಮತ್ತು ಮಹತ್ವ
“ಕಾರ್ಗಿಲ್ ವಿಜಯ ದಿವಸ್” ಪ್ರತಿ ಜುಲೈ 26ರಂದು ಕಾರ್ಗಿಲ್ ವಿಜಯ ದಿವಸ್ ಅಥವಾ ಕಾರ್ಗಿಲ್ ವಿಜಯ ದಿನವನ್ನು ಆಚರಣೆ ಮಾಡುತ್ತಾರೆ.
1999 ಮೇ ತಿಂಗಳಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಜುಲೈ ಅಂತದ ತನಕ ಸುಮಾರು ಎರಡು ತಿಂಗಳು ಕಾಲ ನಡೆಯಿತು.
ಈ ಯುದ್ಧದಲ್ಲಿ ಅನೇಕ ವೀರ ಯೋಧರು ಹುತಾತ್ಮರಾದರು. ಇತಿಹಾಸವನ್ನು ಮೆಲಕು ಹಾಕುವ ದಿನ ಇದಾಗಿದೆ.
1999ರಲ್ಲಿ ಪಾಕಿಸ್ತಾನ ಪಡೆಗಳು ಲಡಕ್ ನ ಕಾರ್ಗಿಲ್ ಪ್ರದೇಶದ ಪರ್ವತ ಪ್ರದೇಶಗಳನ್ನು ಆಕ್ರಮವಾಗಿ ಆಕ್ರಮಿಸಿಕೊಂಡವು.
ಭಾರತೀಯ ಸೇನೆಯು “ಆಪರೇಷನ್ ವಿಜಯ್”ಎಂಬ ಕಾರ್ಯಾಚರಣೆ ಮೂಲಕ ಈ ಪ್ರದೇಶವನ್ನು ಮತ್ತೆ ವಶಪಡಿಸಿಕೊಂಡಿತು.
ಎರಡು ತಿಂಗಳು ಕಾಲ ನಡೆದ ಈ ಸೆಣಸಾಟದಲ್ಲಿ ಭಾರತೀಯ ಅನೇಕ ಸೈನಿಕರು ಹುತಾತ್ಮರಾದರು.
ಕಾರ್ಗಿಲ್ ವಿಜಯ ದಿವಸ್ ಭಾರತೀಯ ಸೈನ್ಯದ ಶೌರ್ಯ ಮತ್ತು ತ್ಯಾಗವನ್ನು ನೆನಪಿಸುತ್ತದೆ ಈ ದಿನವೂ ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸುತ್ತದೆ.
ಈ ದಿನದ ನೆನಪಿಗಾಗಿ ದ್ರಾಸ್ ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ.
ದೇಶದ ಪ್ರಧಾನ ಮಂತ್ರಿ ಮತ್ತು ಗಣ್ಯರು ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪಚನೆ ಮಾಡುತ್ತಾರೆ ಶಾಲೆ ಕಾಲೇಜುಗಳಲ್ಲಿ ದೇಶಭಕ್ತಿ ಪ್ರತಿ ಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಕಾರ್ಗಿಲ್ ವಿಜಯ ದಿವಸ್ ನಮ್ಮ ಎಲ್ಲಾ ಭಾರತೀಯರಿಗೆ ನಮ್ಮ ಸೈನಿಕರ ತ್ಯಾಗ ಮತ್ತು ಕಾರ್ಯ ಸೌರ್ಯವನ್ನು ನೆನಪಿಸಿಕೊಳ್ಳುವ ಮತ್ತು ಗೌರವಿಸುವ ದಿನವಾಗಿರುತ್ತದೆ.
ದೇಶದ ವಿವಿಧ ಭಾಗಗಳಲ್ಲಿ ಶಾಲಾ ಕಾಲೇಜುಗಳಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಣೆ ಮಾಡುತ್ತಾರೆ
ಮತ್ತು ಇದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿ ಹೇಳುತ್ತಾರೆ, ವಿದ್ಯಾರ್ಥಿಗಳಿಗೆ ದೇಶಭಕ್ತಿ, ದೇಶಾಭಿಮಾನ, ಯೋಧರಿಗೆ ಗೌರವ ನೀಡುವುದರ ಬಗ್ಗೆ ದೇಶಭಕ್ತಿ ಗೀತೆ ಮತ್ತು ಪ್ರಬಂಧ ಭಾಷಣ ನತ್ಯ ಕಾರ್ಯಕ್ರಮ ವನ್ನು ಆಯೋಜಿಸಲಾಗುತ್ತದೆ.
ಕಾರ್ಗಿಲ್ ವಿಜಯ ದಿವಸ್ ಒಂದು ದಿನದ ಆಚರಣೆ ಅಲ್ಲ ಇದು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರ ಸ್ಮರಣೆ ಮತ್ತು ಮುಂದಿನ ಯುವ ಜನಾಂಗಕ್ಕೆ ದೇಶಭಕ್ತಿ ಮೂಡಿಸುವ ಒಂದು ಕಲ್ಪನೆಯೂ ಹೌದು.
ಇಂತಹ ಕಾರ್ಯಕ್ರಮಗಳು ಬೆಳೆಯುವ ಮಕ್ಕಳಿಗೆ ದೇಶಪ್ರೇಮದ ಸಂದೇಶವೂ ಆಗಿದೆ ಇಂಥ ಪ್ರಮುಖ ಸಂದರ್ಭವನ್ನು ಪ್ರತಿ ಶಾಲಾ ಕಾಲೇಜಿನಲ್ಲಿ ಆಯೋಜಿಸುವುದು ಒಂದು ಮಹತ್ವದ ಕಾರ್ಯಕ್ರಮ ವಾಗಿರುತ್ತದೆ.
ಪ್ರತಿ ಶಾಲೆ ಕಾಲೇಜಿನಲ್ಲಿ ಯೋಧರಿಗೆ ಗೌರವ ಸೂಚಿಸುವ ಸಲುವಾಗಿ ಕಾರ್ಯನಿರತ ಅಥವಾ ನಿವೃತ್ತ ಯೋಧರನ್ನು ಕರೆಸಿ ಸನ್ಮಾನದ ಜೊತೆಗೆ ವಿದ್ಯಾರ್ಥಿಗಳಿಗೆ ದೇಶಭಕ್ತಿಯ ಬೋಧನೆ ಮಾಡುವುದು. ಈ ಸಂದರ್ಭದಲ್ಲಿ ಸೂಕ್ತವಾಗಿರುತ್ತದೆ
ಯೋಧರ ಜೊತೆ ವಿದ್ಯಾರ್ಥಿಗಳ ಸಮ್ಮಿಲನ. ಮುಂದಿನ ಯುವಕರಿಗೆ ದೇಶಪ್ರೇಮ ಬೆಳೆಸಲು ಸಹಕಾರಿಯಾಗುತ್ತದೆ.
✍️ ಈಶ್ವರ್ ಸಿ ನಾವುಂದ,
ಚಿಂತಕರು, ಬರಹಗಾರ,

