ಹಳಿಯಾಳ : ನಮ್ಮ ಭಾರತೀಯ ಸೇನೆಯ ಧೀರ ಯೋಧರು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ

ಹಳಿಯಾಳ : ನಮ್ಮ ಭಾರತೀಯ ಸೇನೆಯ ಧೀರ ಯೋಧರು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಯಶಸ್ವಿಯಾದ ಐತಿಹಾಸಿಕ ಘಟನೆಯನ್ನು ವಿಜೃಂಭಿಸಲು ಪಕ್ಷದ ಕರೆಯ ಮೇರೆಗೆ ದೇಶಾದ್ಯಂತ ತಿರಂಗಾ ಯಾತ್ರೆ ನಡೆಸಲು ಯೋಜಿಸಿರುವ ಹಿನ್ನೆಲೆಯಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ ಸುನೀಲ್ ಹೆಗಡೆ ಅವರು ಸಾವಿರಾರು ಸಂಖ್ಯೆಯ ದೇಶಾಭಿಮಾನಿ ಗಳೊಂದಿಗೆ ಪಾಲ್ಗೊಂಡು, ಹೆಜ್ಜೆ ಹಾಕಿದರು.
ತಿರಂಗಾ ಯಾತ್ರೆಯು ನಗರದ ಮಹಾಗಣಪತಿ ದೇವಸ್ಥಾನದಿಂದ ಪ್ರಾರಂಭಗೊಂಡು ವನಶ್ರೀ ವೃತ್ತ, ಬಸ್ ನಿಲ್ದಾಣ ರಸ್ತೆ, ತಾಲೀಮ ಚೌಕ, ಅರ್ಬನ್ ಬ್ಯಾಂಕ್ ವೃತ್ತ, ಮೇನ್ ಮಾರ್ಕೇಟ್ ರಸ್ತೆ ಮಾರ್ಗವಾಗಿ ಶಿವಾಜಿ ವೃತ್ತದಲ್ಲಿ ಸಭಾ ಕಾರ್ಯಕ್ರಮ ಮೂಲಕ ಸಮಾರೋಪ ಗೊಂಡಿತು.
ಈ ವೇಳೆ ಮಾಜಿ ಶಾಸಕರು ಶ್ರೀ ಸುನೀಲ್ ಹೆಗಡೆ ಅವರು ಮಾತನಾಡಿ ಮೊನ್ನೆ ನಡೆದ ಯುದ್ಧ ಇದು ಒಂದು ಟ್ರೈಲರ್ ಅಷ್ಟೇ ಇನ್ನು ಮುಂದೆ ಏನಾದರು ನಮ್ಮ ದೇಶದ ಮೇಲೆ ಒಂದೇ ಒಂದು ಭಯೋತ್ಪಾದಕ ಚಟುವಟಿಕೆಯಲ್ಲಿ ಪಾಕಿಸ್ತಾನ ಭಾಗಿಯಾದರೆ ಇಡೀ ಪಾಕಿಸ್ತಾನ ಭೂಪಟದಲ್ಲಿ ಇಲ್ಲದ ಹಾಗೆ ಮಾಡುತ್ತೇವೆ ಭಾರತೀಯ ಸೈನಿಕರು ಪಾಕಿಸ್ತಾನದ ಭಯೋತ್ಪಾದಕರ ಮೇಲೆ ದಾಳಿ ನಡೆಸುವ ಮೂಲಕ ಭಯೋತ್ಪಾದನೆಗೆ ಕಡಿವಾಣ ಹಾಕಿದ್ದಾರೆ ಎಂದು ಹೇಳಿದರು ಮತ್ತೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್ ಎಲ್ ಗೋಟ್ನೆಕರ ಭಾರತ ದೇಶ ಸೌಮ್ಯ ಮತ್ತು ಪ್ರೀತಿಯ ದೇಶ ನಾವು ಎಲ್ಲರನ್ನೂ ಗೌರವಿಸಿ ಪ್ರೀತಿಸುತ್ತೇವೆ. ಆದರೆ ನಮ್ಮ ದೇಶಕ್ಕೆ ಧಕ್ಕೆಯಾದರೆ ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದೇವೆ ಇಂತಹ ದೇಶಭಕ್ತಿಯ ಕಾರ್ಯ ಪ್ರತಿಯೊಬ್ಬರಲ್ಲಿ ಬರಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರುಗಳಾದ ಶ್ರೀ ವಿಠ್ಠಲ್ ಸಿದ್ದಣ್ಣವರ ಶಿವಾಜಿ ಗೋಸಾಯಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಿವಾಜಿ ನರಸಾನಿ ಪ್ರಧಾನಕಾರ್ಯದರ್ಶಿಗಳಾದ ಸಂತೋಷ ಘಟಕಾಂಬಳೆ ವಿ ಎಂ ಪಾಟೀಲ್ ಜಿಲ್ಲಾ ಪದಾಧಿಕಾರಿಗಳು ವಿವಿಧ ಎಲ್ಲಾ ಮೋರ್ಚಾ ಅಧ್ಯಕ್ಷರುಗಳು ಮಾಜಿ ಸೈನಿಕರು, ಕನ್ನಡಪರ ಸಂಘಟನೆಗಳು ಸೇರಿದಂತೆ ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಮೊದಲಾದವರು ಇದ್ದರು.