ನನ್ನ ತಂದೆಯ ಹೆಸರು ಉಳಿಸಲು 40ಕ್ಕೂ ಹೆಚ್ಚು ವರ್ಷ ಮಣಿಪಾಲ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿ, 5,000ಕ್ಕೂ ಹೆಚ್ಚು ರೋಗಿಗಳಿಗೆ ಸಹಾಯ ಮಾಡಿರುವ ತೃಪ್ತಿ ನನಗಿದೆ

ಉಡುಪಿ: ನನ್ನ ತಂದೆ ಹಾಗೂ ಟಿ ಎಮ್ ಎ ಪೈ ಆತ್ಮೀಯರಾಗಿದ್ದರು 1970ರ ಇಸವಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ 25 ಸಿಬ್ಬಂದಿಗಳಿದ್ರು ಆವಾಗ ಮಣಿಪಾಲ ಆಸ್ಪತ್ರೆ ಉಳಿಸಲು ಪೈ ಅವರ ಜೊತೆ ನನ್ನ ತಂದೆ ಬಹಳಷ್ಟು ಸಾತ್ ಕೊಡ್ತಿದ್ರು ಆ ಸಮಯದಲ್ಲಿ ಮಣಿಪಾಲ ಹೆಲ್ತ್ ಕೇರ್ ಎಂಬ ಯೋಜನೆ ತರುವಾಗ ಉಡುಪಿ ಸುತ್ತಮುತ್ತ ವಾಸಿಸುವ ಜನರು ಅತಿ ಬಡವರಾಗಿದ್ದು ಜನರ ಆರೋಗ್ಯ ಸಮಸ್ಯೆ ವಿಚಾರಿಸಲು ಹೆಲ್ತ್ ಕೇರ್ ಎಂಬ ಯೋಜನೆ ಬಹಳಷ್ಟು ಬಡ ಕುಟುಂಬಗಳಿಗೆ ಆಶ್ರಯ ಆಗುತ್ತಿತ್ತು , ಮತ್ತು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಸೇವೆ ನೀಡಲು ಅನುಕೂಲವಾಗುತಿತ್ತು ಎಂದು ಪೈ ಹಾಗೂ ಬಿ ನವೀನ್ ರಾವ್ ರವರ ತಂದೆಯ ಸಂಬಂಧ ಇನ್ನಷ್ಟು ಗಟ್ಟಿಗೊಳಿಸಲು ಮಗನಾಗಿ ನನ್ನಿಂದ ಪೈ ಅವರ ಮಣಿಪಾಲ ಆಸ್ಪತ್ರೆಯಲ್ಲಿ 40 ವರ್ಷಕ್ಕೂ ಹೆಚ್ಚು ಸಮಯ ಸೇವೆ ಸಲ್ಲಿಸಿ ನನ್ನ ತಂದೆಯ ಹೆಸರು ಉಳಿಸುವ ಕೆಲಸ ಮಾಡಿದ್ದೇನೆ

ಸೇವೆಯ ಮಧ್ಯದಲ್ಲಿ 5,000ಕ್ಕೂ ಹೆಚ್ಚು ರೋಗಿಗಳಿಗೆ ಸಹಾಯ ಮಾಡಿದ್ದೇನೆ ಎಂಬ ವಿಶ್ವಾಸ ನನಗಿದೆ ಎಂದು ಬಿ ನವೀನ್ ರಾವ್ ಮಣಿಪಾಲ ಆಸ್ಪತ್ರೆಯ ಅಡಿಟೋರಿಯಂ ಹಾಲಿನಲ್ಲಿ ಬಿ.ನವೀನ್ ರಾವ್ ರವರ ಇಂದು ನಿವೃತ್ತಿ ಕಾರ್ಯಕ್ರಮದಲ್ಲಿ ಹೇಳಿದರು
ತಾನು ಮಣಿಪಾಲ ಆಸ್ಪತ್ರೆಯಿಂದ ಸೇವೆಯನ್ನು ಮುಗಿಸಿ ಹೋಗುವ ಮುಂಚೆ ನಿರಂತರ ಒಂದು ತಿಂಗಳ ಕಾಲ ರಕ್ತದಾನ ಶಿಬಿರ ನಡೆಸಿ ಇಂದಿನ ಯುಗದಲ್ಲಿ ಬಹಳಷ್ಟು ಜನರಿಗೆ ಉಪಯೋಗ ಆಗುವಂತ ಸೇವೆ ಮಾಡಿ ನಿವೃತ್ತಿ ಹೊಂದುತ್ತೇನೆ ಹಾಗೂ ನನ್ನ ಜೀವದ ಕೊನೆಯ ಉಸಿರಿರುವರೆಗೂ ಮಣಿಪಾಲ ಆಸ್ಪತ್ರೆಯನ್ನು ಉಳಿಸುವ ಮತ್ತು ಸಾರ್ವಜನಿಕರಿಗೆ ನನ್ನಿಂದಾಗುವ ಉಪಕಾರವನ್ನು ಮಾಡುತ್ತೇನೆ, ನನ್ನ ಸಾಧನೆಗೆ ಮುಂದಿನ ದಿನದಲ್ಲಿ ಮಣಿಪಾಲ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಸಂಸ್ಥೆಯ ಮ್ಯಾನೇಜ್ಮೆಂಟ್ ರವರು ನನಗೆ ಸಹಕರಿಸಬೇಕೆಂದು ವಿನಂತಿ ಮಾಡಿಕೊಂಡರು,
ಕಾರ್ಯಕ್ರಮದಲ್ಲಿ ಆಸ್ಪತ್ರೆ ಹಿರಿಯ ವೈದ್ಯರು, ಮ್ಯಾನೇಜ್ಮೆಂಟ್, ಹಿರಿಯ ಪೊಲೀಸ ಅಧಿಕಾರಿಗಳು, ಉದ್ಯಮಿಗಳು, ಉಪಸ್ಥಿತರಿದ್ದರು