ಹುಸ್ಕೂರ್ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ.

.ಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ವತಿಯಿಂದ ಹುಸ್ಕೂರು ಗ್ರಾಮ ಪಂಚಾಯತಿಯ ಮುಂದೆ ಪ್ರತಿಭಟನೆ ನಡೆಯಿತು.
ಕೃಷಿ ಕೂಲಿಕಾರ ಸಂಘದ ತಾಲೂಕು ಕಾರ್ಯದರ್ಶಿ ಸರೋಜಮ್ಮ ಮಾತನಾಡಿ ಕೃಷಿ ಕೂಲಿಕಾರರಿಗೆ ವರ್ಷಕ್ಕೆ 200 ದಿವಸ ಕೆಲಸ 600 ಕೂಲಿ ಕೊಡಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚುನಾವಣೆ ವೇಳೆ ಘೋಷಿಸಿದ 2,000 ಮನೆಯ ಯಜಮಾನಿಗೆ ತಲುಪಿತ್ತಿಲ್ಲ ಕೂಡಲೇ ಮನೆಯ ಯಜಮಾನಿಗೆ ಹಣ ಬಿಡುಗಡೆಯಾಗಬೇಕು ನಮ್ಮ ಗ್ರಾಮ ಪಂಚಾಯಿತಿ ಪಿಡಿಓ ರವರಿಗೆ ಮನವಿ ಕೊಟ್ಟಿದ್ದರು ಸಹ ಅವರು ಇಂದು ಕಚೇರಿಗೆ ಬರಲಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಮೋಟಿ ಕುಳ್ಳಮ್ಮ. ಶಿವಯ್ಯ. ಹೊಟ್ಟೆ ಮಾರಯ್ಯ. ಶುಭವತಿ. ಸವಕಯ್ಯ. ಜಯರಾಮು. ನಾಗಮ್ಮ.ಹಾಜರಿದ್ದರು.