ಆಗಸ್ಟ್ 16ರಂದು ಮರವಂತೆ ಕರ್ಕಾಟಕ ಅಮಾವಾಸ್ಯೆ ಜಾತ್ರೋತ್ಸವ
ಬೈಂದೂರು
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರಿನ ಇತಿಹಾಸ ಪ್ರಸಿದ್ಧ ಕಾರಣಿಕ ಕ್ಷೇತ್ರ ಮರವಂತೆ ಮಹಾರಾಜ ಶ್ರೀ ವರಾಹ ಸ್ವಾಮಿ ದೇವಸ್ಥಾನ. ವರ್ಷಂಪ್ರತಿ ಕರ್ಕಾಟಕ ಮಾಸದಲ್ಲಿ ಜರುಗುವ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಬಹಳ ವಿಶೇಷ.
ಮದುವೆಯಾಗಿ ಪ್ರಥಮ ವರ್ಷದಲ್ಲಿ ದೇವಸ್ಥಾನಕ್ಕೆ ಆಗಮಿಸುವ ಮದುಮಕ್ಕಳು ಕರ್ಕಾಟಕ ಅಮಾವಾಸ್ಯೆ ದಿನ ಸಮುದ್ರ ಸ್ನಾನ ಮತ್ತು ಹೊಳೆ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸುವುದು ಇಲ್ಲಿನ ವಾಡಿಕೆ.
ಕೃಷಿಕರು ಹಾಗೂ ಮೀನುಗಾರರು ಈ ಹಬ್ಬವನ್ನು ಅತಿ ವಿಶಿಷ್ಟವಾಗಿ ಆಚರಿಸಿಕೊಂಡು ಬಂದಿದ್ದಾರೆ. ರಾಜ್ಯ ಹೊರ ರಾಜ್ಯದಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸಮುದ್ರಸ್ನಾನ ಹಾಗೂ ಹೊಳೆ ಸ್ನಾನ ಮಾಡುವ ಭಕ್ತಾದಿಗಳು ಎಚ್ಚರ ವಹಿಸಬೇಕೆಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಎಮ್, ನಾಯ್ಕ್ ನಿಮ್ಮ ಪಬ್ಲಿಕ್ ನೆಕ್ಸ್ಟ್ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಆಗಮಿಸುವ ಭಕ್ತಾದಿಗಳು ಭಾರತೀಯ ಪದ್ಧತಿಯ ಉಡುಗೆ ತೊಟ್ಟು ಪ್ರವೇಶ ಮಾಡಬೇಕೆಂದು ಭಕ್ತಾದಿಗಳಿಗೆ ಮನವಿ ಮಾಡಿದ್ದಾರೆ, ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಭಕ್ತಾದಿಗಳು ಹಣ್ಣು ಕಾಯಿ ಹೊರಗಡೆಯಿಂದ ತರಬಾರದು, ಹಣ್ಣು ಕಾಯಿ ಮಾಡುವವರು ದೇವಸ್ಥಾನದ ವತಿಯಿಂದ ಬಟ್ಟೆಯ ಚೀಲದ ಹಣ್ಣು ಕಾಯಿ ದೊರೆಯುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ವರದಿ : ದಾಮೋದರ ಮೊಗವೀರ ನಾಯಕವಾಡಿ ಪಬ್ಲಿಕ್ ನೆಕ್ಸ್ಟ್ ಬೈಂದೂರು