ಕುಂದಾಪುರ ತಾಲೂಕು ಲಾರಿ ಚಾಲಕರ ಸಂಘದ ನೂತನ ಅಧ್ಯಕ್ಷರಾಗಿ ಅಬ್ದುಲ್ಲಾ ಗುಲ್ವಾಡಿ ಆಯ್ಕೆ..!!
0
ಕುಂದಾಪುರ ತಾಲೂಕು ಲಾರಿ ಚಾಲಕರ ಸಂಘ (ರಿ.) ನ ಮಹಾಸಭೆ ಸಂಘದ ಆಡಳಿತ ಕಚೇರಿಯಲ್ಲಿ ಇಂದು ನಡೆಯಿತು.
ಸರ್ವ ಸದಸ್ಯರ ಈ ಸಭೆಯಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ಅಬ್ದುಲ್ಲಾ ಗುಲ್ವಾಡಿ ಆಯ್ಕೆಯಾದರು. ಗೌರವಧ್ಯಕ್ಷರಾಗಿ ಕೆ ಶಂಕರ್ ಕುಂದರ್, ಉಪಾಧ್ಯಕ್ಷರಾಗಿ ರಾಜೇಶ್ ಪೂಜಾರಿ ಹಾಗೂ ಪ್ರಶಾಂತ್ ಪೂಜಾರಿ ಪ್ರದಾನ ಕಾರ್ಯದರ್ಶಿಯಾಗಿ ಡೊಲ್ಫಿ ಕರ್ವಲ್ಲೋ, ಜೊತೆ ಕಾರ್ಯದರ್ಶಿಯಾಗಿ ಶಂಶುದೀನ್, ಕೋಶಾಧಿಕಾರಿಯಾಗಿ ರಾಜೇಶ್, ಕಾನೂನು ಸಲಹೆಗಾರರಾಗಿ ರವೀಂದ್ರ ಶೇರಿಗಾರ, ಆಡಳಿತ ಮಂಡಳಿಯ ಸದಸ್ಯರಾಗಿ ಸುರೇಶ್, ಮಂಜಣ್ಣ, ಷಣ್ಮುಖ ಅರುಣ್ ಕುಮಾರ್, ರೋನಿ ಮೆಂಡೊನ್ಸ ಆಯ್ಕೆಯಾದರು.