ಕೋಟ : ದಲಿತ ಹೋರಾಟಗಾರ್ತಿ ಆರತಿ ಗಿಳಿಯಾರ್ ವಿಡಿಯೋ, ಮತ್ತು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿ ಮಾಡಿದ ಐವರ ಮೇಲೆ ದೂರ ದಾಖಲು

Spread the love

ಕೋಟ: ಕೋಟ ಮೂಡುಗಿಳಿಯಾರಿನ ದಲಿತ ಮಹಿಳೆ ಆರತಿ ಗಿಳಿಯಾರ್ ಅವರ ಅಸಭ್ಯ ಅಸಹ್ಯಕರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಶೇಖರ ಹಾವಂಜೆ, ಬೆಳ್ಳಾಲ ಗ್ರಾಮದ ವಿ. ಗೋಪಾಲ ಶೆಟ್ಟಿ, ಐರೋಡಿಯ ರಾಜು ಎಂ ನಾರಾಯಣ ರಾವ್, ಬಾರ್ಕೂರಿನ ವಿಜಯ ಪೂಜಾರಿ ಮತ್ತು ಉಡುಪಿ ಕಿನ್ನಿಮುಲ್ಕಿಯ ಸೃಜೀತ್ ಇವರುಗಳ ಮೇಲೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರತಿ ಅವರು ಈ ಹಿಂದೆ ಇವರ ಮೇಲೆ ಹಿರಿಯಡ್ಕ ಮತ್ತು ಬ್ರಹ್ಮಾವರ ಠಾಣೆಯಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ ನಿರಂತರವಾಗಿ ಹಲ್ಲೆ ನಡೆಸುತ್ತಾ ಬಂದಿದ್ದು, ಇದೀಗ ಫೋಟೊ ಇರಿಸಿ ಆಡಿಯೋ ಒಂದನ್ನು ಸಮಾಜದಲ್ಲಿ ನಿಕೃಷ್ಟವಾಗಿ ಕಾಣುವ ರೀತಿಯಲ್ಲಿ ಹರಿ ಬಿಟ್ಟಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

ದೂರಿನ ಸಾರಾಂಶ : ಪಿರ್ಯಾದಿದಾರರು ಬ್ರಹ್ಮಾವರ ಮತ್ತು ಹಿರಿಯಡ್ಕ ಠಾಣೆಯಲ್ಲಿ ನೀಡಿದ ದೂರಿನ ಕುಮ್ಮಕ್ಕಿನಿಂದ ಆರೋಪಿ ಶೇಖರ ಹಾವಂಜೆ ರವರು ನಿರಂತರವಾಗಿ ಹಲ್ಲೆ ನಡೆಸುತ್ತಾ ಬಂದಿರುವುದಾಗಿದ್ದು, ಈ ಹಿಂದಿನ ಘಟನೆಯ ದ್ವೇಶದಿಂದಾಗಿ ದುರುದ್ದೇಶ ಪೂರ್ವಕವಾಗಿ ಆರೋಪಿತರು ದೂರುದಾರರ ವಿರುದ್ಧ ಸಂಬಂಧವಲ್ಲದ ಆಡಿಯೋವನ್ನು ಬಳಸಿ ವಿಜಯಲಕ್ಷ್ಮೀ ಶಿಬರೂರು ಹಾಗೂ ಅಮ್ಮರವಿ ಯಾನೆ ರವೀಂದ್ರ್ರವರೊಂದಿಗೆ ಮಾತನಾಡಿದ ಖಾಸಗಿ ಆಡಿಯೋವನ್ನು ದುರ್ಬಳಕೆ ಮಾಡಿಕೊಂಡು ಸದ್ರಿ ಆಡಿಯೋದಲ್ಲಿ ಪಿರ್ಯಾದುದಾರರ ಫೋಟೋವನ್ನು ಇರಿಸಿ ಸದ್ರಿ ವಿಡಿಯೋ ತುಣುಕಿದ್ದಲ್ಲಿ ಕನ್ನಡ ಮತ್ತು ತುಳು ಹಾಸ್ಯ ಸಂಬಾಷಣೆಯ ತುಣುಕನ್ನು ಬಳಸಿ ಟ್ರೋಲ್ ಮಾಡಿ ಸದ್ರಿ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು ದಲಿತ ಮಹಿಳೆಯಾದ ಪಿರ್ಯಾದಿದಾರರನ್ನು ಅಶ್ಲೀಲವಾಗಿ ಮತ್ತು ಅಸಭ್ಯವಾಗಿ ಮತ್ತು ಅಸಹ್ಯಕರ ರೀತಿಯಲ್ಲಿ ಸಮಾಜದಲ್ಲಿ ನಿಕೃಷ್ಟವಾಗಿ ಕಾಣುವ ರೀತಿಯಲ್ಲಿ ಪ್ರಸಾರ ಮಾಡಿ, ದುರ್ಬಳಕೆ ಮಾಡಿಕೊಂಡಿರುವುದಾಗಿದೆ. ಕೋಟ ಠಾಣಾ ಅ. ಕ್ರ. 69/2023 ಕಲಂ: 292, 509, 109 RW 34 IPC 3(1)(r), 3(1) (u) SC/ST Act. ದೂರು ದಾಖಲಾಗಿದೆ.

Right Click Disabled