ಉಡುಪಿ: ಮಹಿಳೆಯ ಫೋಟೊ ಎಡಿಟ್ ಮಾಡಿ ಕಿರುಕುಳ; ಪ್ರಕರಣ ದಾಖಲು

Spread the love

ಉಡುಪಿ : ಮಹಿಳೆಯೊಬ್ಬರ ಫೋಟೊವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟು ಕಿರುಕುಳ ನೀಡುತ್ತಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇಖರ ಹಾವಂಜೆ, ರಾಜು ಎಂ.ಎನ್. ವಿಜಯ ಬಾರ್ಕೂರು, ಸೃಜಿತ್, ಜಯಕರ ನಾಯ್ಕ, ವಿ.ಗೋಪಾಲ ಶೆಟ್ಟಿ ಎಂಬವರು ಸುಮಾರು 15 ದಿನಗಳ ಹಿಂದೆ ಆರತಿ ಗಿಳಿಯಾರ್ ಎಂಬವರ ಫೋಟೊವನ್ನು ನಾಗವಲ್ಲಿ ವಿಡಿಯೋ ವೊಂದಕ್ಕೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಸರಿಸಿ ತೊಂದರೆ ನೀಡಿರುವುದಾಗಿ ದೂರಲಾಗಿದೆ.

Right Click Disabled