ಜೋಗಿ ಕ್ರಿಕೆಟ್ ಪಂದ್ಯಾಕೂಟದಲ್ಲಿ ಮುತಾಲಿಕ್ ಗೆ ಸನ್ಮಾನ

Spread the love

ಪ್ರಪ್ರಥಮ ಬಾರಿಗೆ 90 ಗಜಗಳ JPL ಟ್ರೋಫಿ ಜೋಗಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಕೂಟ ಉದ್ಯಾವರ ಗ್ರಾಮ ಪಂಚಾಯತ್ ಮೈದಾನದಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಜೋಗಿ ಸಮಾಜದ ಅಧ್ಯಕ್ಷರಾದ ಹರೀಶ್ ಜೋಗಿ ಕಟಪಾಡಿ ಹಾಗೂ ಸಮಾಜ ಹಿರಿಯ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.
ನಂತರ ಕ್ರೀಡಾಕೂಟಕ್ಕೆ ಆಗಮಿಸಿದ ಪ್ರಮೋದ್ ಮುತಾಲಿಕ್ ರವರು, ಸಮಾಜದ ಕ್ರೀಡಾ ಸ್ಪೂರ್ತಿ, ಯುವಕರ ಕಣ್ಮಣಿಯಾಗಿ ಸದಾ ಸಮಾಜದ ಯುವಕರನ್ನು‌ ಪ್ರೋತ್ಸಾಹಿಸುತ್ತಿದ್ದ, ಇತ್ತೀಚಿಗೆ ಆಗಲಿದ ಬೈದಬೆಟ್ಟು ಸಂತೋಷ ಜೋಗಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ದಾಂಜಲಿ ಸಲ್ಲಿಸಿದರು.
ಪ್ರಮೋದ್ ಮುತಾಲಿಕ್ ಆಗಮನ ಪಂದ್ಯಾಕೂಟದ ಮೆರುಗನ್ನು‌ ಇನ್ನಷ್ಟು ಹೆಚ್ಚಿಸಿತು.

ಪಂದ್ಯಕೂಟದಲ್ಲಿ ಆಟಗಾರರು ಹಾಗೂ ಸಮಾಜದ ಮಹನಿಯರು, ವಿಕ್ಷಕರು ಸೇರಿದಂತೆ ಸುಮಾರು 300ಕ್ಕೂ ಅಧಿಕ ಮಂದಿಯ ಸಮ್ಮುಖದಲ್ಲಿ ಜೋಗಿ ಪ್ರಿಮಿಯರ್ ಲೀಗ್ ವತಿಯಿಂದ “ಶ್ರೀ ಪ್ರಮೋದ್ ಮುತಾಲಿಕ್” ರವರನ್ನು ಗೌರವಿಸಿ ಸನ್ಮಾನಿಸಲಾಯಿತು.

Right Click Disabled