ಉಡುಪಿ ಜಿಲ್ಲೆಯಲ್ಲಿ ಶ್ರೀರಾಮಸೇನೆ ಚುನಾವಣಾ ಸ್ಪರ್ಧೆ ಖಚಿತ!

ಇಂದು ಉಡುಪಿಯಲ್ಲಿ ನಡೆದ ಶ್ರೀರಾಮಸೇನೆಯ ಜಿಲ್ಲಾ ಬೈಠಕ್ ನಲ್ಲಿ ಹಲವು ವಿಚಾರಗಳು ಪ್ರಸ್ತಾಪಗೊಂಡವು. ಶ್ರೀರಾಮಸೇನೆಯ ಕಾರ್ಯಕರ್ತರು ಯಾವಾಗಲೂ ಬಿಜೆಪಿ ಕಾರ್ಯಕರ್ತರೇ ಹೊರತು ಬೇರೆ ಪಕ್ಷದವರಲ್ಲ. ಆದರೆ ಇತ್ತೀಚಿಗೆ ಬಿಜೆಪಿ ನಾಯಕರು ನಮ್ಮ ಕಾರ್ಯಕರ್ತರನ್ನು ಮೂರನೇ ಕಣ್ಣಿನಿಂದ ನೋಡುವ ಪರಿಣಾಮವಾಗಿ, ನಾವು ಈ ಬಾರಿ ಚುನಾವಣೆಯಲ್ಲಿ ಸ್ಪರ್ದಿಸಬೇಕೆಂದು ಕಾರ್ಯಕರ್ತರ ಒತ್ತಾಸೆ ಬಿಜೆಪಿ ವಿರುದ್ಧ ಭಾರಿ ಆಕ್ರೋಶದೊಂದಿಗೆ ಹೊರ ಹೊಮ್ಮಿತ್ತು. ಕಾರ್ಯಕರ್ತರ ಈ ಆಕ್ರೋಶದ ಪರಿಣಾಮವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಮತ್ತು ಬೈಂದೂರುನಲ್ಲಿ ಶ್ರೀರಾಮಸೇನೆ ಸ್ಪರ್ದಿಸುವುದು ಖಚಿತವೆಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
