ಪತ್ರಕರ್ತೆ, ದಲಿತ ಹೋರಾಟಗಾರ್ತಿ ಆರತಿ ಗಿಳಿಯಾರ್ ಮೇಲೆ RPIK ರಾಜ್ಯ ಉಪಾಧ್ಯಕ್ಷ ಶೇಖರ್ ಹಾವಂಜೆಯಿಂದ ಹಲ್ಲೆ

ಲೈವ್ ನಲ್ಲಿ ಸತ್ಯ ವಿಷಯ ಬಿಚ್ಚಿಟ್ಟಿದ್ದೆ ಆರತಿ ಹಲ್ಲೆಗೆ ಮೂಲ ಕಾರಣ
ಆರತಿ ಗಿಳಿಯಾರ್ ದಲಿತ ಹೋರಾಟಗಾರ್ತಿ ಮತ್ತು ಪತ್ರಕರ್ತೆಯಾಗಿ ನಿರ್ಭೀತಿಯಿಂದ, ದಿಟ್ಟ ನೇರ ಲೈವ್ ಮೂಲಕ ಹಲವಾರು ತಿಂಗಳಿಂದ ಉಡುಪಿ ಜಿಲ್ಲೆಯ ವಿವಿಧ ಕಡೆಯಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ಮತ್ತು ಸರಕಾರಿ ಅಧಿಕಾರಿಗಳಿಗೆ ಮತ್ತು ಉದ್ಯಮಿಗಳಿಗೆ ಲೈವ್ ಮಾಡಿ ಅವರ ಹೆಸರನ್ನು ಕೆಡಿಸುವವರ ವಿರುದ್ಧ ಅವರ ಲೈವ್ ಬಂಡವಾಳವನ್ನು ಬಯಲಿಗೆ ಎಳೆದಿದ್ದೆ ಈ ಹಲ್ಲೆಗೆ ಕಾರಣವೆನ್ನಲಾಗಿದೆ.
ಘಟನೆಯ ಹಿಂದಿನ ಸಾರಾಂಶ:
ಫಿರ್ಯಾದಿದಾರರು ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಆಗಿದ್ದು, ದಿನ ಪತ್ರಿಕೆಯ ವರದಿಗಾರಳಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಅವರು ಈ ದಿನ ದಿನಾಂಕ 15.03.2023 ರಂದು ಹಂದಾಡಿ ಗ್ರಾಮದ, ಆಕಾಶವಾಣಿ ಜಂಕ್ಷನ್ ನಿಂದ ಸ್ವಲ್ಪ ಮುಂದೆ ತನ್ನ ಸೂಟರ್ ಅನ್ನು ನಿಲಿಸಿ, ರಿಪೋರ್ಟರ್ ಕಿರಣ್ ರವರ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಾ ನಿಂತುಕೊಂಡಿರುವಾಗ ಮಧ್ಯಾಹ್ನ 4:39 ಗಂಟೆಯ ಸುಮಾರಿಗೆ ಅವರ ಪರಿಚಯದ ಆರೋಪಿ ಶೇಖರ ಹಾವಂಜೆ ಎಂಬವರು KA.20.3208 ಆಲ್ಟೊ ಕಾರಿನಲ್ಲಿ ಬಂದು ಫಿರ್ಯಾದಿದಾರರ ಎದುರಿನಲ್ಲಿ ಕಾರನ್ನು ನಿಲಿಸಿ ಇಳಿದು ಹತ್ತಿರ ಬಂದು, ಫಿರ್ಯಾದಿದಾರರನ್ನು ಉದ್ಧರಿಸಿ “ಬೇವರ್ಸಿ, ರಂಡೆ” ನೀನು ಬಾರಿ ಲೈವ್ ವಿಡಿಯೋಗಳನ್ನು ಹಾಕುತ್ತೀಯಾ, ನಿನಗೆ ಈ ಮೊದಲೇ ವಾರ್ನಿಂಗ್ ಕೊಟ್ಟರೂ ಲೈವ್ ವಿಡಿಯೋವನ್ನು ಹಾಕಿ ಬಾರಿ ಹಾರಾಡುತ್ತಿಯಲ, ಎಂದು ಅವಾಚ್ಯವಾಗಿ ಬೈದು ಫಿರ್ಯಾದಿದಾರರ ತಲೆ ಕೂದಲನ್ನು ಹಿಡಿದೆಳೆದು ಹಾಗೂ ಅಂಗಿಯ ಕಾಲರ್ ಹಿಡಿದು ಕಾಲಿನಿಂದ ಹೊಟ್ಟೆಗೆ ತುಳಿದಿರುತ್ತಾರೆ.



ಫಿರ್ಯಾದಿದಾರರು ಅಲ್ಲೇ ಕೆಳಗೆ ಬಿದ್ದು ನೋವಿನಿಂದ ಕೂಗಿದಾಗ ಅಲ್ಲಿ ಜನರು ಸೇರಿದ್ದು, ಫಿರ್ಯಾದಿದಾರರು ಎದ್ದು ನಿಂತಾಗ ಅವರನ್ನು , ಆರೋಪಿಯು ಕೈಯಿಂದ ತಳ್ಳಿ, ಕಾರನ್ನು ಹತ್ತಿ ಹೋಗುವಾಗ ಫಿರ್ಯಾದಿದಾರರನ್ನು ಉದ್ದೇಶಿಸಿ ಬೇವರ್ಸಿ ರಂಡೆ ನಿನಗೆ ಇಷ್ಟ್ಯಕ್ಕೆ ಮುಗಿಯಲಿಲ್ಲ, ಇನ್ನೊಮ್ಮೆ ಎಲ್ಲಿಯಾದರೂ ಲೈವ್ ವಿಡಿಯೋವನ್ನು ಮಾಡಿದರೆ, ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ, ಎಂದು ಬೆದರಿಕೆ ಹಾಕಿ ಕಾರಿನಲ್ಲಿ ಹೊಗಿರುತ್ತಾನೆ.
ಫಿರ್ಯಾದಿದಾರರು ಪತ್ರಿಕೆಯ ವರದಿಗಾರಳಾಗಿದ್ದು, ಅವರು ಕೆಲವೊಮ್ಮೆ ಲೈವ್ ವರದಿಯನ್ನು ಮಾಡುತ್ತಿದ್ದು ಇದೇ ಕಾರಣಕ್ಕೆ ದ್ವೇಷದಿಂದ ಆರೋಪಿಯು ಫಿರ್ಯಾದಿದಾರರಿಗೆ ಕೈಯಿಂದ ಹಲ್ಲೆ ಮಾಡಿ, ತುಳಿದು ಅವರ ಮಾನ ಹಾನಿ ಮಾಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 43/2023 : ಕಲಂ 323, 354, 354(B), 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.