ತುರುವೇಕೆರೆ ತಾಲೂಕಿನ ಮಾಯಸಂದ್ರದಲ್ಲಿ ಅಗ್ನಿ ಅವಘಡದಿಂದಾಗಿ 3 ಕೋಳಿ ಅಂಗಡಿಗಳು ಅಗ್ನಿಗಾಹುತಿ, ಅಗ್ನಿಶಾಮಕ ದಳದಿಂದ ನಂದಿ ಹಾರಿಸುವ ಕಾರ್ಯ.

Spread the love

ವರದಿ- ಸಚಿನ್ ಮಾಯಸಂದ್ರ.

ತುರುವೇಕೆರೆ: ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಸುಮಾರು 4ರ ಸಂದರ್ಭದಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಮೂರು ಕೋಳಿ ಅಂಗಡಿಗಳು ಸಂಪೂರ್ಣ ಅಗ್ನಿ ಗಾಹುತಿಯಾಗಿರುವ ಘಟನೆ ನಡೆದಿದೆ.

ಮಾಯಸಂದ್ರ ಗ್ರಾಮದ ಮೈಸೂರು- ತುಮಕೂರು ಮುಖ್ಯರಸ್ತೆಯಲ್ಲಿನ ಪಕ್ಕದಲ್ಲಿಯೇ ಮಾರಯ್ಯ, ಮುಬಾರಕ್ ಪಾಷ, ಮತ್ತು ಕುಮಾರ್ ಮಾಲೀಕತ್ವದ ಮೂರು ಕೋಳಿ ಅಂಗಡಿಗಳು (ಚಿಕನ್ ಸೆಂಟರ್) ಅಗ್ನಿಗಾಹುತಿಯಾದ ಅಂಗಡಿಗಳು, ಅಂಗಡಿಯಲ್ಲಿದ್ದ ಕೋಳಿಗಳು, ಪೀಟೋಪಾಕರಣಗಳು, ಜನರೇಟರ್, ಅಳತೆಯ ತಕ್ಕಡಿಗಳು, ಅಂಗಡಿ ಮಳಿಗೆಗಳು ಸೇರಿದಂತೆ ಅಂಗಡಿಯಲ್ಲಿದ್ದ ಸಿಲಿಂಡರ್ ಗಳು ಸಹಾ ಸ್ಪೋಟಗೊಂಡಿವೆ.

ಸಾಲಾ ಸೂಲ ಮಾಡಿದ್ದ 3 ಕೋಳಿ ಅಂಗಡಿ ವ್ಯಾಪಾರಿಗಳಿಗೆ ಈ ಘಟನೆಯಿಂದ 10 ಲಕ್ಷಕ್ಕೂ ಹೆಚ್ಚಿನ ಮೌಲ್ಯ ನಷ್ಟವಾಗಿದೆ, ವ್ಯಾಪಾರಕ್ಕೆ ನಮ್ಮಗಳ ಹೊಟ್ಟೆ ಮೇಲೆ ಹೊಡೆದಂತಾಗಿದೆ ಎಂದು ಮಾಲೀಕರಾದ ಮುಬಾರಕ್ ಪಾಷಾ ಮಾರಯ್ಯ ಕುಮಾರ್ ತಮ್ಮ ಅಳಲನ್ನು ತೋಡಿಕೊಂಡರು ಮತ್ತು ಸರ್ಕಾರದಿಂದ ಏನಾದರೂ ಪರಿಹಾರ ಕೊಡಿಸುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ತುರ್ತಾಗಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿ ಅತೀ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುದಾಸೀರ್. ಯುವ ಮುಖಂಡರಾದ ಮಂಜುನಾಥ್. ಹೋಟೆಲ್ ರಾಮಕ್ಕ, ಅಯೂಬ್. ಪ್ರವೀಣ್ ಬೈತರ ಹೊಸಳ್ಳಿ. ಗಂಗಾಧರ್. ಯೋಗೀಶ್ ಗೌಡ ಸೇರಿದಂತೆ ಗ್ರಾಮಸ್ಥರು, ನೊಂದ ಮಾಲೀಕರು ಮುಂತಾದವರಿದ್ದರು.

Right Click Disabled