ಉಪ್ಪಾರರ ವಧು-ವರರ ಸಮಾವೇಶ

ಬೆಂಗಳೂರು: ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾದ ವtwತಿಯಿಂದ ಜನವರಿ 8 ರಂದು ಬೆಳಗಾವಿಯ ಸಂಗಮ್ ರೆಸಿಡೆನ್ಸಿ ಹೊಟೇಲ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಉಪ್ಪಾರರ ವಧು-ವರರ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಂತರ್ ರಾಜ್ಯ ಮತ್ತು ಅಂತರ್ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಅನೇಕ ಕುಟುಂಬಗಳು ಈ ಕಾರ್ಯಕ್ರಮಕ್ಕೆ ಬರಲಿದ್ದಾರೆ. ನೊಂದಾಯಿಸಿಕೊಳ್ಳುವವರು ಮೊಬೈಲ್ ಸಂಖ್ಯೆ 9845143579 ಸಂಪರ್ಕಿಸಬಹುದು.
ಈಗಾಗಲೇ ಆನ್‍ಲೈನ್ ನಲ್ಲಿ ಅರ್ಜಿಗೆ ಆಹ್ವಾನಿಸಲಾಗಿದೆ. ಸಮಾಜದಬಾಂಧವರು ಬರುವಾಗ ಪ್ರಿಂಟ್ ಹಾಕಿಸಿಕೊಂಡು ಫೋಟೋದೊಂದಿಗೆ ವಿವರಗಳನ್ನು ಭರ್ತಿ ಮಾಡಿಕೊಂಡು ತರತಕ್ಕದ್ದು, ಈ ವಧು-ವರರ ವೇದಿಕೆಯನ್ನು ಸಮಾಜದ ಬಾಂಧವರು ಸದು ಪಯೋಗಪಡಿಸಿಕೊಳ್ಳಬೇಕೆಂದು ಉಪ್ಪಾರ ಮಹಾಸಭಾದ ರಾಜ್ಯಾಧ್ಯಕ್ಷ ವಿಷ್ಣು ಲಾತೂರ್ ಹಾಗೂ ಪ್ರಧಾನ ಕಾರ್ಯದರ್ಶಿ ಭರತ್ ಎಸ್. ಮೈಲಾರ್ ತಿಳಿಸಿದ್ದಾರೆ.