ಉಚಿತ ಕೃತಕ ಕಾಲು, ಕ್ಯಾಲಿಪರ್ ಗಳು ಹಾಗು ಮುಂಗೈ ಬೃಹತ್ ಜೋಡಣ ಶಿಬಿರ

ಬೆಂಗಳೂರು ರೋಟರಿ ಬೆಂಗಳೂರು ಪೀಣ್ಯ ವತಿಯಿಂದ ಹಾಗೂ ಶ್ರೀ ಭಗವಾನ್ ಮಹಾವೀರ ವಿಕಲಾಂಗ ಸಹಾಯತ ಸಮಿತಿ, ಜೈಪುರ ಸಹಯೋಗದಿಂದ 25ನೇ ವರ್ಷದ ಉಚಿತ ಕೃತಕ ಕಾಲು, ಕ್ಯಾಲಿಪರ್ ಗಳು ಹಾಗು ಮುಂಗೈ ಬೃಹತ್ ಜೋಡಣ ಶಿಬಿರ ಜನವರಿ 3 ರಿಂದ 9 ವರೆಗೆ
ಗಣೇಶ್ ಬಾಗ್, ಎಸ್.ಎಸ್.ಬಿ.ಎಸ್. ಜೈನ್ ಸಂಘ ಟ್ರಸ್ಟ್, ಭಗವಾನ್ ಮಹಾವೀರ ರಸ್ತೆ, (ಇನ್ ಫೆಂಟ್ರಿ ರಸ್ತೆ) ಶಿವಾಜಿನಗರ, ಬೆಂಗಳೂರು ಇಲ್ಲಿ ಆಯೋಜಿಸಲಾಗಿದೆ.
ಈ ಶಿಬಿರವು ಏಳು ದಿನಗಳ ಕಾಲ ನಡೆಯಲಿದ್ದು ಇಲ್ಲಿಗೆ ಬರುವವರಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಇರುತ್ತದೆ. ಬರುವವರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ ತರಬೇಕು. ಮೊಬೈಲ್ ಸಂಖ್ಯೆ- 9845052554 ಮತ್ತು 9341214915 ನಂಬರ್ ಸಂಪರ್ಕಿಸಬೇಕೆಂದು ಲಿಂಬ್ ಕ್ಯಾಂಪ್ ಸಂಯೋಜಕ ಜಿ.ಆರ್. ವಸಂತ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.