ಸಲಾಂ ಆರತಿಗೆ ವಿರೋಧ ಯಾಕೆ? ಜಯರಾಮ್ ಅಂಬೆಕಲ್ಲು.

Spread the love

ಟಿಪ್ಪು ಸುಲ್ತಾನನ ಕಾಲದಿಂದಲೂ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಸಲಾಂ ಆರತಿಯನ್ನು ನಡೆಸಿಕೊಂಡು ಬಂದಿರುತ್ತಾರೆ. ಆದರೆ ಇತ್ತೀಚೆಗೆ ಇದೇ ವಿಷಯದಲ್ಲಿ ಹಲವಾರು ಗೊಂದಲಗಳು ಸೃಷ್ಟಿ ಆಗಿರುವುದು ನಮಗೆಲ್ಲ ತಿಳಿದಿದೆ. ಇತ್ತೀಚಿನ ಕೆಲವು ದಿನಗಳ ಹಿಂದೆ ರಾಜ್ಯ ಸರ್ಕಾರವು ಸಲಾಂ ಆರತಿಯನ್ನು ರದ್ದುಗೊಳಿಸಿ ಸಂದ್ಯಾ ಆರತಿ ಎಂದು ಮರುನಾಮಕರಣದ ಹಿಂದೆ ಚುನಾವಣೆಯ ಅಜೆಂಡ ಇದೆ ಎಂಬುದು ನನ್ನ ಅನಿಸಿಕೆ. ಉರ್ದುವಿನಲ್ಲಿ “ಸಲಾಂ” ಎಂದರೆ ಗೌರವ ಸೂಚಕ ಪದವಾಗಿರುತ್ತದೆ. ಅದಾಗಿಯು ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನದಲ್ಲಿ ಸಲಾಂ ಆರತಿಯ ಬಗ್ಗೆ ಗೊಂದಲ ಬಂದಿರುವುದು ಜನಸಾಮಾನ್ಯರಿಗಂತು ಗೊಂದಲಕೀಡು ಮಾಡಿದೆ. ಟಿಪ್ಪುವಿನ ಕೆಲವು ಧೋರಣೆಗಳಿಗೆ ನಾನು ಸಹ ವಿರೋಧ ವ್ಯಕ್ತಪಡಿಸುತ್ತೇನೆ ಆದರೆ ಸಲಾಂ ಆರತಿ ಬಗ್ಗೆ ಸರಕಾರ ತೆಗೆದುಕೊಂಡ ನಿರ್ಧಾರ ಸರಿಯೋ, ತಪ್ಪು ಅಂತಾ ಗೊತ್ತಿಲ್ಲ…! ಒಟ್ಟಿನಲ್ಲಿ ಸಲಾಂ ಎಂದರೆ ಗೌರವ ಸೂಚಕ ಪದಗಳೇ ಹೊರತು ಬೇರೆ ಯಾವುದೇ ಅರ್ಥವಿಲ್ಲವೆಂದು ನನ್ನ ಭಾವನೆ ಎಂದು ಉಡುಪಿಯ ಹಿಂದೂ ಮುಖಂಡ ಜಯರಾಮ್ ಅಂಬೆಕಲ್ಲು ಪ್ರತಿಕ್ರಿಯಿಸಿದ್ದಾರೆ.

Right Click Disabled