ಕಾರ್ಕಳದಲ್ಲಿ ಸದ್ದಿಲ್ಲದೇ, ಸದ್ದು ಮಾಡುತ್ತಿದ್ದಾರೆ ಜೆಡಿಎಸ್ ಅಭ್ಯರ್ಥಿ.

Spread the love

ಕಾರ್ಕಳ ವಿಧಾನಸಭಾ ಕ್ಷೇತ್ರದ ಜಾತ್ಯಾತೀತ ಜನತಾದಳ ಪಕ್ಷದ ಅಭ್ಯರ್ಥಿಯಾಗಿ ಹೆಬ್ರಿ ಶ್ರೀಕಾಂತ್ ಕುಚ್ಚೂರು ರವರನ್ನು ಪಕ್ಷದ ವರಿಷ್ಟ ದೇವೇಗೌಡರ ಆಶಯದಂತೆ ಪಕ್ಷವು ಘೋಷಿಸಿದೆ.
ಮೂಲತ ಹೆಬ್ರಿಯವರಾದ ಇವರು, ಆಟೋ ಚಾಲಕರಾಗಿ ದುಡಿಯುತ್ತಿದ್ದು ಬಂದ ಅದಾಯದಲ್ಲಿ ಬಹುಪಾಲು ಬಡವರಿಗಾಗಿ ವಿನಿಯೋಗಿಸುವ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಇವರ ಬಗ್ಗೆ ಹೆಬ್ರಿ ಮಾತ್ರವಲ್ಲ iಕಾರ್ಕಳದಲ್ಲಿಯೂ ಜನ ಸಾಮಾನ್ಯರಲ್ಲಿಯೂ ಉತ್ತಮ ಸ್ಪಂದನೆ ಇದೆ. ಬಿಲ್ಲವ ಸಮಾಜದವರಾದ ಇವರು ಎಲ್ಲಾ ಜಾತಿ, ಧರ್ಮ ಹಾಗೂ ವಿವಿಧ ಸಂಘ ಸಂಸ್ಥೆ ಯೊಂದಿಗೆ ಉತ್ತಮ ಬಾಂಧವ್ಯವಿದೆ.
ಕಾರ್ಕಳದಲ್ಲಿ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಅತೀ ಚಿಕ್ಕ ವಯಸ್ಸಿನ ಇವರು ಸ್ಪರ್ದಿಸುತ್ತಿರುವುದು ಜನರಲ್ಲಿ “ನಮ್ಮವ” ಎಂಬ ಭಾವನೆ ಹುಟ್ಟುಹಾಕಿದೆ.

Right Click Disabled