ಪೋಷಣ್ ಅಭಿಯಾನ ಪೌಷ್ಟಿಕ ಆಹಾರ ಶಿಬಿರ
ಕುಂದಾಪುರ: ಇಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ ಮತ್ತು ಗ್ರಾಮ ಪಂಚಾಯತ್ ಕೋಟೇಶ್ವರದ ಸಹಯೋಗದೊಂದಿಗೆ ಕೋಟೇಶ್ವರ ಗ್ರಾಮದ 4 ಅಂಗನವಾಡಿ ಕೇಂದ್ರದ ಪೋಷಣ್ ಅಭಿಯಾನ ಪೌಷ್ಟಿಕ ಆಹಾರ ಶಿಬಿರ ಮತ್ತು ಪ್ರಾತ್ಯಕ್ಷಿತೆ ಕಾರ್ಯಕ್ರಮವನ್ನು ಅಂಕದಕಟ್ಟೆಯ ಶಾಲೆಯಲ್ಲಿ ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ಸ್ಥಳೀಯ 10 ಗರ್ಭಿಣಿ ಮಹಿಳೆಯರಿಗೆ ಬಾಗೀನ ಅರ್ಪಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ಥಳೀಯ ಮಹಿಳೆಯರು ತಯಾರಿಸಿ ತಂದಂತ ಪೌಷ್ಠಿಕ ಆಹಾರವನ್ನು ತಿನ್ನಲು ಬಡಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟೇಶ್ವರ ಪಂಚಾಯತ್ ನ ಉಪಾಧ್ಯಕ್ಷರಾದ ಶ್ರೀಮತಿ ರಾಗಿಣಿ ದೇವಾಡಿಗರವರುವಹಿಸಿದರು, ಇಲಾಖಾ ಅಧಿಕಾರಿಗಳಾದ ಶ್ರೀ ಮಂಜುನಾಥರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು, ತಾಲೂಕು IC ಅಧಿಕಾರಿ ಶ್ರೀಮತಿ ಭಾಗ್ಯಲಕ್ಷ್ಮಿ ಕಾರ್ಯಕ್ರಮದ ಉದ್ದೇಶ ಮತ್ತು ಪ್ರಯೋಜನೆಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ದಿನೇಶ್ ನಾಯ್ಕ್, ಸದಸ್ಯರಾದ ಶ್ರೀ ಸುರೇಶ್ ದೇವಾಡಿಗ, ಶ್ರೀ ರೊಯ್ಸನ ಡಿಮೆಲ್ಲೋ, ಶ್ರೀಮತಿ ಲೋಲಾಕ್ಷಿ ಎನ್ ಕೊತ್ವಾಲ್, ಶ್ರೀಮತಿ ಆಶಾ ಜಿ ಕುಂದರ್, ಶ್ರೀಮತಿ ಲತಾ ಶೇಖರ ಮೊಗವೀರ, ಶ್ರೀಮತಿ ಸುಶೀಲರವರು, ಅಂಕದಕಟ್ಟೆ ಶಾಲೆಯ ಮುಖ್ಯಶಿಕ್ಷಕರಾದ ಶ್ರೀಮತಿ ಲತಾ ರಾಣಿ, ಆಶಾ ಕಾರ್ಯಕರ್ತೆಯರು ಮತ್ತು ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅಂಗನವಾಡಿ ಶಾಲಾ ಶಿಕ್ಷಕಿಯಾದ ಶ್ರೀಮತಿ ಶ್ಯಾಮಲ ದೇವಾಡಿಗ ಕಾರ್ಯಕ್ರಮ ನಿರೂಪಿಸದರು.