ಗಣೇಶನ ಸ್ತುತಿಯ ಲಕ ಲಕ ಲಕುಮಿಕರ ಲಂಬೋದರ ಭಕ್ತಿ ಸಾಂಗ್ ಬಿಡುಗಡೆ

Spread the love

ಬೆಂಗಳೂರು: ವಿಘ್ನೇಶ್ವರನನ್ನು ಸ್ತುತಿಸುವ “ಲಕ ಲಕ ಲಕುಮಿಕರ ಲಂಬೋದರ” ಎಂಬ ಗಣೇಶನ ಸ್ತುತಿಯ ಭಕ್ತಿ ಗೀತೆಯ ಆಡಿಯೋ ಮತ್ತು ವಿಡಿಯೋ ಸಾಂಗ್ ಅನ್ನು ಆಧ್ಯಾತ್ಮಿಕ ಗುರು ಶ್ರೀ ಪ್ರಮೋದ್ ಗುರೂಜಿ, ಸಮುದಾಯ ಟಿವಿಯ ಅಂಜನ್ ಕುಮಾರ್, ಗಾಯಕ ಡಾ. ವಿ ನಟರಾಜ. ಮೌರ್ಯ ಹೋಟೆಲ್ ನಲ್ಲಿಂದು ಬಿಡುಗಡೆ ಮಾಡಿದರು.

ಅಂಜನ್ ಕುಮಾರ್ ಪ್ರೊಡಕ್ಷನ್ಸ್” ಲಾಂಛನದಲ್ಲಿ ಮಾಡಿಬಂದಿರುವ ವಿಘ್ನೇಶ್ವರನನ್ನು ಸ್ತುತಿಸುವ “ಲಕ ಲಕ ಲಕುಮಿಕರ” ಎಂಬ ಗಣೇಶನ ಸ್ತುತಿಯ ಭಕ್ತಿಯನ್ನು ಸಾಂಗ್ ಅನ್ನು ಬರಹಗಾರ, ಗಾಯಕ ಡಾ. ವಿ ನಟರಾಜ್ ರವರ ಧ್ವನಿಯಲ್ಲಿ ಹಾಡಿದ್ದಾರೆ. ಸಿರಿ ಮ್ಯೂಸಿಕ್ ಸಂಸ್ಥೆ ಸಾಂಗ್ ಆಡಿಯೋ ಮತ್ತು ವಿಡಿಯೋ ಹಕ್ಕುಗಳನ್ನು ಪಡೆದಿದೆ.

ಕರ್ನಾಟಕದ ಸಂಗೀತ ಪ್ರಿಯರು, ಸಿರಿ ಮ್ಯೂಸಿಕ್ ನಲ್ಲಿ ಈ ಸಾಂಗ್ ಅನ್ನು ನೋಡಿ ಪ್ರೋತ್ಸಾಹಿಸಬೇಕಾಗಿ ಅಂಜನ್ ಕುಮಾರ್ ರಾಜ್ಯದ ಜನತೆಯನ್ನು ವಿನಂತಿಸಿದರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪುಷ್ಪ ನಾಗ್ಭೂಷಣ್, ಡಾ.ಸುರೇಶ್ ಚಿಕ್ಕಣ್ಣ, ಸ್ವಾದಕುಟೀರ ಹೋಟೆಲಿನ ಸೌಮ್ಯ ಗೌಡ, ವೈದ್ಯರು ಡಾ. ಅಕ್ಷಿತಾ ಶೆಟ್ಟಿ, ಸರಸ್ವತಿ ಉಪಸ್ಥಿತರಿದ್ದರು.

ಲಕಲಕ ಲಕುಮಿಕರ ಲಂಬೋದರ ಸಾಂಗ್ ನ ಗಾಯಕ ಡಾ. ವಿ ನಟರಾಜ, ನಿರ್ಮಾಣ ಸಂಸ್ಥೆ ಸಮುದಾಯ ಟಿವಿ ಪ್ರೊಡಕ್ಷನ್ಸ್, ನಿರ್ಮಾಪಕರು ಸಮುದಾಯ ಅಂಜನ್ ಕುಮಾರ್, ಡೈರೆಕ್ಟರ್ ಸರ್ವಣ ಜಿ., ಸಾಹಿತ್ಯ ಪ್ರವೀಣ್ ರಾಮಕೃಷ್ಣ, ಸಂಗೀತ ನಿರ್ದೇಶಕ ಚಂದ್ರು ಓಬಯ್ಯ, ನೃತ್ಯ ನಿರ್ದೇಶಕ ಸುಜಿತ್ ಯಾದವ್, ಕ್ಯಾಮೆರಾ ಕೀರ್ತಿವರ್ಧನ್, ಸಂಕಲನ ಡಿ ಐ ವಿ ಎಫ್ ಎಕ್ಸ್ : ಭಾರ್ಗವ್ ಕೆ ಎಂ, ರೆಕಾರ್ಡಿಂಗ್ ಸ್ಟುಡಿಯೋ: ಲೂಪ್ ಸ್ಟುಡಿಯೋ, ಸೌಂಡ್ ಇಂಜಿನಿಯರ್ ರಾಜ್ಶೇಖರ್ ಮಾಸ್ಟರಿಂಗ್ ಪರೇಖ ಸ್ಟುಡಿಯೋ ಕಲೆ ಸರಮಣ ಮತ್ತು ಡ್ಯಾನ್ಸಸ್ ಡಿವೈನ್ ಸ್ಟುಡಿಯೋ, ನೃತ್ಯ ನಟನೆಯಲ್ಲಿ ಡಾ. ನಟರಾಜ, ಅಭಿಷೇಕ್ ಮತ್ತು ಡ್ಯಾನ್ಸರ್ಸ್ ಡಿವೈನ್ ಸ್ಟುಡಿಯೋ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

Right Click Disabled