ಎಂಎಸ್ಐಎಲ್ ಸಂಸ್ಥೆಗೆ “ಏಷ್ಯಿಯಾಒನ್ ಗ್ಲೋಬಲ್ ಇಂಡಿಯನ್ ಆಫ್ ದ ಇಯರ್2021-22”

Spread the love

ಬೆಂಗಳೂರು: ವಿಶ್ವದಾದ್ಯಂತ ಅತ್ಯುತ್ತಮ ಸಾಧನೆ ಮಾಡಿದ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಸಂಶೋಧನೆ ನಡೆಸಿದ “ಏಷ್ಯಾ ಒನ್ ಮ್ಯಾಗಜಿನ್” ಹಾಗೂ “ಯು.ಆರ್.ಎಸ್ ಮೀಡಿಯಾ ಇಂಟರ್ ನ್ಯಾಷನಲ್” ರವರು ಎಂಎಸ್ಐಎಲ್ ಸಂಸ್ಥೆಯ ಕಾರ್ಯಕ್ಷಮತೆಯನ್ನು ಗುರುತಿಸಿ
“ಏಷ್ಯಿಯಾಒನ್ ಗ್ಲೋಬಲ್ ಇಂಡಿಯನ್ ಆಫ್ ದ ಇಯರ್2021-22” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ದಿನಾಂಕ 25-08-2022 ರಂದು ನವದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ
ನಡೆದ ಕಾರ್ಯಕ್ರಮದಲ್ಲಿ
ಎಂಐಎಸ್ಎಲ್ ನ
ವ್ಯವಸ್ಥಾಪಕ ನಿರ್ದೇಶಕರಾದ ವಿಕಾಶ್ ಕುಮಾರ್ (ಐಪಿಎಸ್)
ರವರಿಗೆ “ಏಷ್ಯಿಯಾಒನ್ ಗ್ಲೋಬಲ್ ಇಂಡಿಯನ್ ಆಫ್ ದ ಇಯರ್2021-22” ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ವಿವಿಧ ದೇಶಗಳಲ್ಲಿನ ರಾಯಭಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಂಸ್ಥೆಗಳ ಮಾಲೀಕರು, ಹೂಡಿಕೆದಾರರು ಹಾಗೂ ವೃತ್ತಿಪರರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಎಂಎಸ್ಐಎಲ್: ಕರ್ನಾಟಕ ರಾಜ್ಯ ಸರ್ಕಾರದ ಸಂಸ್ಥೆಯಾದ ಮೈಸೂರ್ ಸೇಲ್ಸ್ ಇಂಟರ್‌ನ್ಯಾಷನಲ್‌ ಅಮಿಟೆಡ್ ಸಂಸ್ಥೆಯು ಯಶಸ್ವಿಯಾಗಿ 6 ದಶಕಗಳನ್ನು ಪೂರೈಸುತ್ತಿದೆ. ಸಂಸ್ಥೆಯು ಚಿಲ್ಲರೆ ಮದ್ಯ ಮಾರಾಟ, ಚಿಟ್ ಫಂಡ್, ವಿದ್ಯಾ ಮತ್ತು ಲೇಖಕ್ ಬ್ರ್ಯಾಂಡ್ ನ ನೋಟ್ ಪುಸ್ತಕಗಳು ಮತ್ತು ಲೇಖನ ಸಾಮಗ್ರಿ, ಸೋಲಾರ್ ವಾಟರ್ ಹೀಟರ್, ಪ್ರವಾಸ ಮತ್ತು ಪ್ರಯಾಣ, ಜನರಿಕ್ ಔಷಧಿ ಹಾಗೂ ಇನ್ನಿತರೇ ಉತ್ಪನ್ನಗಳ ಮಾರಾಟ ಮತ್ತು ಸೇವೆಗಳಲ್ಲಿ ತೊಡಗಿಸಿಕೊಂಡಿದೆ.
ಅನಧಿಕೃತ ಚಿಟ್ ಕಂಪನಿಗಳಿಂದ ಸಾರ್ವಜನಿಕರು ಮೋಸ ಹೋಗುವುದನ್ನು ತಪ್ಪಿಸಲು ಎಂಎಸ್‌ಐಎಲ್‌ ಸಂಸ್ಥೆಯು ಚಿಟ್ ಫಂಡ್ ವ್ಯವಹಾರವನ್ನು ನಡೆಸುತ್ತಿದ್ದು, ಪ್ರಸ್ತುತ 26 ಚಿಟ್ ಶಾಖೆಗಳನ್ನು ಹೊಂದಿದೆ. 2 ಲಕ್ಷಕ್ಕೂ ಅಧಿಕ ಚಂದಾದಾರರು ಈವರೆಗೂ ಚಿಟ್ ಫಂಡ್ ಅನುಕೂಲವನ್ನು ಪಡೆದಿರುತ್ತಾರೆ.
ರಾಜ್ಯಾದ್ಯಂತ ಎಂಎಸ್‌ಐಎಲ್ ಸಂಸ್ಥೆಯ ಒಟ್ಟು 980 ಮದ್ಯ ಮಳಿಗೆಗಳು ಕಾರ್ಯನಿರ್ವಹಿಸುತ್ತಿವೆ. ಗ್ರಾಹಕರಿಗೆ ಉತ್ತಮ ಗುಣಮಟ್ಟದ ಮದ್ಯವನ್ನು ಎಂ.ಆ‌ರ್.ಪಿ ದರದಲ್ಲಿ ಒದಗಿಸುವ ಉದ್ದೇಶ ಎಂಎಸ್‌ಐಎಲ್‌ ಸಂಸ್ಥೆಯದ್ದಾಗಿದೆ. ಎಂಎಸ್‌ಐಎಲ್ ಸಂಸ್ಥೆಯು ಸುಮಾರು 5 ದಶಕಗಳಿಂದ ಅತ್ಯುತ್ತಮ ಗುಣಮಟ್ಟದ ವಿದ್ಯಾ ಹಾಗೂ ಲೇಖಕ್‌ ನೋಟ್ ಪುಸ್ತಕಗಳನ್ನು ವಿದ್ಯಾರ್ಥಿ ವೃಂದಕ್ಕೆ ಒದಗಿಸುತ್ತಾ ಬಂದಿದೆ. ನೋಟ್ ಪುಸ್ತಕಗಳ ಉತ್ಪಾದನೆಯಲ್ಲಿ ಸಣ್ಣ ಕೈಗಾರಿಕೆಗಳಿಗೆ ಸಂಸ್ಥೆಯು ಉತ್ತೇಜನ ನೀಡುತ್ತಿದ್ದು ಹಲವಾರು ಜನರಿಗೆ ಪರೋಕ್ಷವಾಗಿ ಉದ್ಯೋಗವನ್ನು ಒದಗಿಸಲಾಗಿರುತ್ತದೆ.
ನವೀಕರಿಸಬಹುದಾದ ಇಂದನದ ಬಳಕೆಗೆ ಸರ್ಕಾರವು ಉತ್ತೇಜನ ನೀಡುತ್ತಿರುವ ಹಿನ್ನೆಲೆಯಲ್ಲಿ ಎಂಎಸ್‌ಐಎಲ್‌ ಸಂಸ್ಥೆಯು ಸೋಲಾ‌ರ್ ಉತ್ಪನ್ನಗಳನ್ನು ಕೂಡ ಮಾರಾಟ ಮಾಡುತ್ತಿದೆ. ಎಂಎಸ್‌ಐಎಲ್ ಸಂಸ್ಥೆಯು ಪ್ರಧಾನ ಮಂತ್ರಿ ಜನೌಷಧಿ ಯೋಜನೆಯಲ್ಲಿಯೂ ಕೂಡ ಭಾಗಿಯಾಗಿದ್ದು, ಎಲ್ಲಾ ವರ್ಗದ ಜನರಿಗೆ ಅತಿ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಜನರಿಕ್ ಔಷಧಿಯನ್ನು ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ 87 ಜನೌಷಧಿ ಮಳಿಗೆಗಳನ್ನು ವಿವಿಧ ಸರ್ಕಾರಿ ಆಸ್ಪತ್ರೆಗಳ ಆವರಣಗಳಲ್ಲಿ ಪ್ರಾರಂಭಿಸಿ ಕಾರ್ಯನಿರ್ವಹಿಸಲಾಗುತ್ತಿದೆ. ಪ್ರವಾಸ ಮತ್ತು ಪ್ರಯಾಣ ಉದ್ಯಮದಲ್ಲಿ ಇರುವ ಅವಕಾಶಗಳನ್ನು ಮನಗಂಡು ಸಂಸ್ಥೆಯು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರವಾಸ ಪ್ಯಾಕೇಜ್‌ಗಳನ್ನು ಎಲ್ಲಾ ವರ್ಗದ ಜನರಿಗೆ ಕೈಗೆಟುಕುವ ದರಗಳಲ್ಲಿ ಒದಗಿಸುತ್ತಿದೆ.
ಒಟ್ಟಾರೆ ಎಂಎಸ್‌ಐಎಲ್ ಸಂಸ್ಥೆಯು 2021-22 ನೇ ಸಾಲನಲ್ಲಿ ರೂ.2901 ಕೋಟಿ ರೂಪಾಯಿಗಳ ವಹಿವಾಟು ನಡೆಸಿದೆ. 2021-22 ನೇ ಸಾಲಿನಲ್ಲಿ ಒಟ್ಟು 91 ಕೋಟಿ ರೂಪಾಯಿಗಳಷ್ಟು ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.33 ರಷ್ಟು ಹೆಚ್ಚು ಲಾಭ ಗಳಸಲಾಗಿದೆ. ಪ್ರಸ್ತುತ 2022-23ನೇ ಸಾಲಿನಲ್ಲಿ 3350 ಕೋಟಿ ರೂಪಾಯಿಯ ವಹಿವಾಟು ನಡೆಸಲು ಯೋಜಿಸಲಾಗಿದೆ. ಅಂದಾಜು 110 ಕೋಟಿ ರೂಪಾಯಿಯಷ್ಟು ನಿವ್ವಳ ಲಾಭಗಳಿಸುವ ನಿರೀಕ್ಷೆ ಹೊಂದಿದೆ. ಸಂಸ್ಥೆಯ ಕಾರ್ಯಕ್ಷಮತೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿದೆ.

Right Click Disabled