ಕಂದಾಯ ಇಲಾಖೆಯ
ಕಾರ್ಯಕ್ಷಮತೆಯನ್ನು ಮೆಚ್ಚಿ, ವಿಧವೆಯೊಬ್ಬರ
ಅಭಿನಂದನಾ ಪತ್ರ

Spread the love

ಬ್ರಹ್ಮಾವರ: ಬ್ರಹ್ಮಾವರ ತಾಲೂಕು
ತಹಶೀಲ್ದಾರರು ಕಂದಾಯ ಇಲಾಖೆಯ ಕಾರ್ಯದ ವೇಗವನ್ನು ಹೆಚ್ಚಿಸಿದ ಮತ್ತು
ಸಾಮಾಜಿಕ ನ್ಯಾಯ ನೀಡಿದ ತಹಶೀಲ್ದಾರ
ರಾಜಶೇಖರ ಮೂರ್ತಿಯವರ ನೇತೃತ್ವವದ ಕಂದಾಯ ಇಲಾಖೆಯ ತಂಡದ
ಕಾರ್ಯಕ್ಷಮತೆಯನ್ನು ಮೆಚ್ಚಿ, ಮುಖ್ಯಮಂತ್ರಿಗಳಿಗೆ, ವಿಧವೆಯೊಬ್ಬರು
ಅಭಿನಂದನಾ ಪತ್ರ ಬರೆದ ಅಪರೂಪದ ಘಟನೆ
ನಡೆದಿದೆ. ಬ್ರಹ್ಮಾವರ ತಾಲೂಕಿನ ಬಿಲ್ಲಾಡಿ ಗ್ರಾಮದ ಗಿರಿಜಮ್ಮ ಎನ್ನುವವರ ಪತಿ ಪುಟ್ಟ ಮರ್ಕಳರವರು ಬಿಲ್ಲಾಡಿ ಗ್ರಾಮದ ಸರ್ವೆ ನಂಬರ್ 119 / 1 ಕ್ಕೆ ಸರಕಾರಕ್ಕೆ ಶುಲ್ಕ ನೀಡಿ ಪಡೆದ ಭೂಮಿಯನ್ನು, ಅವರು ನಿಧನರಾದ ಬಳಿಕ
ಗಿರಿಜಮ್ಮ ಮತ್ತು ಮಕ್ಕಳಾದ ನಾಗರತ್ನ, ಮಂಜುಳಾ ರವರು ನೀಡಿದ ಅರ್ಜಿಯಂತೆ
ಇತ್ಯರ್ಥ ಮಾಡಿ ಹೊಸ ಪಹಣಿ ನೀಡಿದ ಕುರಿತು
ಗಿರಿಜಮ್ಮರವರು ಮುಖ್ಯಮಂತ್ರಿ ಬಸವರಾಜ
ಬೊಮ್ಮಾಯಿಯವರಿಗೆ ಕೃತಜ್ಞತಾ ಪತ್ರ
ಬರೆದಿದ್ದಾರೆ.
ಹಲವಾರು ತೊಡಕುಗಳನ್ನೇ ಹೇಳಿ ದೂರದ
ಕಛೇರಿಗಳಿಗೆ ಅಲೆದು ಸುಸ್ತು ಹೊಡೆಯುವ
ಜನಸಾಮಾನ್ಯರಿಗೆ ತ್ವರಿತವಾಗಿ ಜನರ
ಸಮಸ್ಯೆಯನ್ನು ಪರಿಹರಿಸುವ ಇಂತಹ
ಅಧಿಕಾರಿಗಳು ಕಂದಾಯ ಇಲಾಖೆಯ ಗೌರವಕ್ಕೆ ಭಾಜನರಾಗುತ್ತಾರೆ ಎಂದು
ಇಲಾಖಾಧಿಕಾರಿಗಳನ್ನು ಮೆಚ್ಚಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಕೂಡಾ ಒಂದು ಪ್ರತಿಯನ್ನು
ಕಳುಹಿಸಿದ್ದಾರೆ.
ತಹಶೀಲ್ದಾರ ರಾಜಶೇಖರ ಮೂರ್ತಿಯವರು
ಕಂದಾಯ ಇಲಾಖೆಯ ಕೆಲಸವನ್ನು ಮೆಚ್ಚಿ
ಗ್ರಾಮೀಣ ಭಾಗದ ಮಹಿಳೆಯೊಬ್ಬರು ಲಿಖಿತವಾಗಿ
ಮುಖ್ಯ ಮಂತ್ರಿಯವರಿಗೆ ಬರೆದ ಮೊದಲ ವ್ಯಕ್ತಿಗೆ ಲಿಖಿತವಾಗಿ ಕೃತಜ್ಞತೆ
ಸಲ್ಲಿಸಿದ್ದಾರೆ.
ಸಾವಿರಾರು ವರ್ಷದ ಇತಿಹಾಸ ಇರುವ ಕಂದಾಯ ಇಲಾಖೆ, ದಕ್ಷ ಹಾಗೂ ಪ್ರಾಮಾಣಿಕ ಜನಸ್ನೇಹಿ ಅಧಿಕಾರಿಗಳು ಸರಕಾರದ ಹಲವಾರು
ಯೋಜನೆಯನ್ನು ಸಕಾಲದಲ್ಲಿ ಅನುಷ್ಠಾನ
ಮಾಡುತ್ತಿದ್ದಾರೆ. ಟೀಕೆ ಮತ್ತು ಒತ್ತಡದ
ನಡುವೆ ಕೆಲಸ ಮಾಡುವ ಕಂದಾಯ ಇಲಾಖೆಯಲ್ಲಿ ದುಡಿಯುವವರಿಗೆ ಇಂತಹ
ಶ್ಲಾಘನೆ ಹೆಚ್ಚು ಉತ್ಸಾಹ ನೀಡುತ್ತದೆ ಎಂದು
ಗಿರಿಜಮ್ಮರಿಗೆ ಕೃತಜ್ಞತೆಗೆ ಸಲ್ಲಿಸಿದ್ದಾರೆ.
ಕೆಲವೇ ವರ್ಷದ ಹಿಂದೆ ತಾಲೂಕು ಆದ
ಬ್ರಹ್ಮಾವರಕ್ಕೆ ಕೇವಲ ಒಂದು ವರ್ಷದ
ಅವಧಿಯ ಹಿಂದೆ ಬ್ರಹ್ಮಾವರಕ್ಕೆ ಬಂದ
ತಹಶೀಲ್ದಾರ ರಾಜಶೇಖರ ಮೂರ್ತಿಯವರು
ಇಂತಹ ಅನೇಕ ಹಳೆ ಸಮಸ್ಯೆಗಳನ್ನು
ಮತ್ತು ದಾರಿಯ ಸಂಘರ್ಷಗಳನ್ನು
ಸ್ವತಃ ನಿಂತು ಸಾಮರಸ್ಯದಿಂದ
ಬಗೆಹರಿಸಿರುವುದು. ಕಂದಾಯ ಇಲಾಖೆಯಲ್ಲಿರುವ ಹಳೆಯ ಕಡತವನ್ನು
ತ್ವರಿತವಾಗಿ ವಿಲೇವಾರಿ ಮಾಡಿದ್ದೂ ಇದೆ. ಕೆಟ್ಟ
ಅಧಿಕಾರಿಗಳನ್ನೇ ಕಂಡ ಜನರು, ದಕ್ಷ
ಅಧಿಕಾರಿಗಳ್ನು ಶ್ಲಾಘಿಸುವುದು ಉತ್ತಮ
ಬೆಳವಣಿಗೆಯಾಗಿದೆ.

Right Click Disabled