ಬೆಂಗಳೂರಿನಿಂದ ಊರುಗಳಿಗೆ ಮುಖ ಮಾಡಿದ ಜನ

Spread the love

ಕೊರೊನಾ ಸೊಂಕು ಹೆಚ್ಚಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂದಿನಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗುತ್ತಿದೆ. ಅದರಂತೆ ಇಂದು ರಾತ್ರಿ 8 ಗಂಟೆಯಿಂದ ಸೋಮವಾರ ಬೆಳಗ್ಗೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.

ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಜನ ಊರಿನತ್ತ ಮುಖ ಮಾಡಿದ್ದಾರೆ.

ದೊಡ್ಡ ದೊಡ್ಡ ಬ್ಯಾಗ್​​ಗಳನ್ನ ಹಿಡಿದು ಜನ ಊರಿನತ್ತ ಹೊರಟಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದ ಕೆಎಸ್​ಆರ್​​ಟಿಸಿ ಬಸ್​​ಸ್ಟ್ಯಾಂಡ್ ಹಾಗೂ ರೈಲ್ವೇ ನಿಲ್ದಾಣ ಪ್ರಯಾಣಿಕರಿಂದ ತುಂಬು ತುಳುಕುತ್ತಿದೆ.

ಅಂದ್ಹಾಗೆ ಬೆಂಗಳೂರಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ನಿನ್ನೆ ಒಂದೇ ದಿನ ಬರೋಬ್ಬರಿ 4609 ಕೊರೊನಾ ಕೇಸ್​ಗಳು ದಾಖಲಾಗಿದ್ದವು. ಇಂದು ಬೆಂಗಳೂರಿನಲ್ಲಿ 6,613 ಕೊರೊನಾ ಪಾಸಿಟಿವ್ ಕೇಸ್​​ಗಳು ದಾಖಲಾಗುವ ಸಾಧ್ಯತೆ ಇದೆ.

Right Click Disabled